ಈ ಪರಿಹಾರವನ್ನು ಶುಕ್ಲಪಕ್ಷದ ಶುಕ್ರವಾರ ದಿನದಂದು ಪ್ರಾರಂಭಿಸಿದರೆ ಒಳ್ಳೆಯದು. ಶುಕ್ರವಾರದ ದಿನದಂದು ಸೂರ್ಯೋದಯಕ್ಕೂ ಮುಂಚೆ ಎದ್ದು, ತಲೆಸ್ನಾನ ಮಾಡಬೇಕು. ಮನೆಯಲ್ಲಿ ಪೂಜೆ ಮುಗಿಸಿ ದೇವಿ ದೇವಸ್ಥಾನಕ್ಕೆ ಭೇಟಿನೀಡಿ ದರ್ಶನ ಪಡೆದು, ನಂತರ ಆ ದೇವಸ್ಥಾನದಲ್ಲಿರುವ ಅಶ್ವಥ್ ಮರದ ಹತ್ತಿರ ಹೋಗಿ ಅಲ್ಲಿ ತಾಮ್ರದ ನಾಣ್ಯವನ್ನು ತೆಗೆದುಕೊಂಡು ತಲೆಗೆ 7 ಬಾರಿ ಸುತ್ತಿಕೊಂಡು ಮನಸ್ಸಿನಲ್ಲಿ ಸಾಲದ ಬಾಧೆ ತೀರಿ ಹೋಗಿ ಧನ ಪ್ರಾಪ್ತಿಯಾಗಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಆ ತಾಮ್ರದ ನಾಣ್ಯವನ್ನು ಮಣ್ಣಿನ ದೀಪದಲ್ಲಿ ಹಾಕಿ ಎಳ್ಳೆಣ್ಣೆಯಿಂದ ದೀಪಾರಾಧನೆ ಮಾಡಬೇಕು.
ಈ ದೀಪ ಪಶ್ಚಿಮ ದಿಕ್ಕಿಗೆ ಮುಖ ನೋಡುವಂತೆ ಇಡಬೇಕು. ನಂತರ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಅರ್ಪಿಸಬೇಕು. ಪೂಜೆ ನಂತರ ಅಲ್ಲಿಂದ ಯಾವ ವಸ್ತುವನ್ನು ಮನೆಗೆ ಮರಳಿ ತರಬಾರದು. ಹಾಗೇ ಮನೆಗೆ ಹೋಗುವ ದಾರಿಯಲ್ಲಿ ಯಾರಬಳಿ ಮಾತನಾಡಬಾರದು. ಈ ಬಗ್ಗೆ ಯಾರ ಬಳಿಯೂ ಹೇಳಬಾರದು. ಈ ಪೂಜೆ ಸಂಜೆ 6 ಗಂಟೆಯ ಒಳಗೆ ಮಾಡಿದರೆ ಉತ್ತಮ. ಹೀಗೆ 7 ವಾರಗಳು ಈ ಪೂಜೆಯನ್ನು ಶೃದ್ಧೆ, ಭಕ್ತಿಯಿಂದ ಮಾಡಬೇಕು. ಇದರಿಂದ ಋಣಬಾಧೆ ತೀರಿ ಧನ ಪ್ರಾಪ್ತಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ