ಬೆಂಗಳೂರು : ನವರಾತ್ರಿಯ ಶುಭದಿನದಂದು ವಿಶೇಷವಾಗಿ ದೇವಿಗೆ ಪೂಜೆ, ವ್ರತ ಸಲ್ಲಿಸಲಾಗುತ್ತದೆ. ಅಂದು ದೇವಿಯನ್ನು ವಿವಿಧ ರೂಪದಲ್ಲಿ ಹಲವು ಬಗೆಯ ನೈವೇದ್ಯ, ಹೂಗಳಿಂದ ಪೂಜಿಸುತ್ತಾರೆ. ಆದರೆ ನವರಾತ್ರಿಯ ಪೂಜೆ ವ್ರತವನ್ನು ಮಾತ್ರ ಇಂತವರು ಆಚರಿಸಬಾರದು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಪೂಜೆ ಮಾಡಬಾರದು, ಯಾಕೆಂದರೆ ಪೂಜೆ ಸಂಪೂರ್ಣವಾಗಿ ಮಾಡಿದರೆ ಮಾತ್ರ ಅದರ ಫಲ ಸಿಗುತ್ತದೆ. ಅನಾರೋಗ್ಯದಿಂದ ಪೂಜೆ ಅರ್ಧಕ್ಕೆ ನಿಂತರೆ ಅದರಿಂದ ಅನರ್ಥವಾಗುತ್ತದೆ.
ಆಡಂಬರಕ್ಕಾಗಿ, ತೋರಿಕೆಗಾಗಿ ನವರಾತ್ರಿಯ ಪೂಜೆಯನ್ನು ಮಾಡಬೇಡಿ. ಮನಸ್ಸಿನಲ್ಲಿ ಭಕ್ತಿ ಇರದೆ ಮಾಡಿದ ಪೂಜೆಯಿಂದ ನಿಮಗೆ ಕೆಟ್ಟದಾಗುತ್ತದೆ.