Webdunia - Bharat's app for daily news and videos

Install App

ಸಂಜೆ ಹೊತ್ತು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ದಾರಿದ್ರ್ಯ ಖಂಡಿತಾ

Krishnaveni K
ಸೋಮವಾರ, 28 ಅಕ್ಟೋಬರ್ 2024 (08:38 IST)
ಬೆಂಗಳೂರು: ನಮ್ಮ ಹಿರಿಯರು, ಶಾಸ್ತ್ರಗಳಲ್ಲಿ ಹೇಳುವಂತೆ ಕೆಲವೊಂದು ಕೆಲಸಗಳನ್ನು ಮುಸ್ಸಂಜೆ ಹೊತ್ತು ಮಾಡುವುದು ಅಷ್ಟು ಶುಭಕರವಲ್ಲ. ಇದರಿಂದ ದಾರಿದ್ರ್ಯ ಬರಬಹುದು. ಆ ಕೆಲಸಗಳು ಯಾವುವು ನೋಡೋಣ.

ಸಂಜೆ ಹೊತ್ತು ಹಣ ಕೊಡಬೇಡಿ
ಸಂಜೆ ಹೊತ್ತಿಗೆ ಯಾರೋ ನಿಮ್ಮ ಬಳಿ ಸಾಲ ಅಥವಾ ದಾನವಾಗಿ ಹಣ ಕೊಡಿ ಎಂದು ಕೇಳಲು ಬಂದರೆ ಕೊಡಬೇಡಿ. ಈ ಹೊತ್ತಿನಲ್ಲಿ ಹಣ ಕೊಡುವುದರಿಂದ ನಿಮಗೆ ದಾರಿದ್ರ್ಯ ಬರುವ ಸಂಭವವಿರುತ್ತದೆ. ಸಂಜೆ ಹೊತ್ತು ಲಕ್ಷ್ಮೀ ಬರುವ ಸಮಯ. ಈ ಸಮಯದಲ್ಲಿ ಹಣ ಕೊಡುವುದು ಎಂದರೆ ಸಂಪತ್ತನ್ನು ಹೊರಗೆ ಹಾಕಿದಂತೆ.

ಹಾಲು, ಹಾಲಿನ ಉತ್ಪನ್ನ
ಸಂಜೆ ಹೊತ್ತಿಗೆ ಹಾಲು ಅಥವಾ ಹಾಲಿನ ಉತ್ಪನ್ನವನ್ನು ಯಾರೋ ಕೇಳಿದರೆಂದು ಕೊಡಲು ಹೋಗಬೇಡಿ. ಇವೆರಡೂ ಸಮೃದ್ಧಿಯ ಸಂಕೇತ. ಸಂಜೆ ಹೊತ್ತಿಗೆ ಇವನ್ನು ಕೊಟ್ಟರೆ ನಿಮ್ಮ ಸಮೃದ್ಧಿಯನ್ನೇ ದಾನ ಮಾಡಿದಂತೆ. ಇದರಿಂದ ದಾರಿದ್ರ್ಯ ಉಂಟಾಗಬಹುದಾಗಿದೆ.

ಸಂಜೆ ಹೊತ್ತಿಗೆ ತುಳಸಿ ಕೊಯ್ಯಬೇಡಿ
ಸಂಜೆ ಹೊತ್ತಿಗೆ ತುಳಸಿ ಕೊಯ್ಯುವುದಿರಲಿ, ಮುಟ್ಟಲೂ ಹೋಗಬೇಡಿ. ಈ ಹೊತ್ತಿನಲ್ಲಿ ತುಳಸಿ ಮುಟ್ಟಲು ಹೋದರೆ ಋಣಾತ್ಮಕ ಶಕ್ತಿ ಹೆಚ್ಚಬಹುದು. ಮನೆಯಲ್ಲಿ ಸಮೃದ್ಧಿ ನಾಶವಾಗಬಹುದು. ಅದರ ಬದಲು ಈ ಹೊತ್ತಿನಲ್ಲಿ ತುಳಸಿಗೆ ದೀಪವಿಟ್ಟು ವಂದಿಸಿದರೆ ಸಮೃದ್ಧಿ ಉಂಟಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಮುಂದಿನ ಸುದ್ದಿ
Show comments