ಬೆಂಗಳೂರು : ಶಾಸ್ತ್ರಗಳ ಪ್ರಕಾರ ಒಂದೊಂದು ಬಣ್ಣಗಳಿಗೂ ಒಂದೊಂದು ಮಹತ್ವವಿರುತ್ತದೆ. ವಿಭಿನ್ನ ಬಣ್ಣಗಳು ವಿಭಿನ್ನ ವಿಷಯಗಳನ್ನು ಹೊಂದಿರುವ ಜೊತೆಗೆ ವಿಭಿನ್ನ ಉಪಯೋಗಗಳನ್ನು ತಿಳಿಸುತ್ತದೆ. ಅದನ್ನು ಅರಿತು ನಾವು ಆ ಬಣ್ಣಗಳನ್ನು ಬಳಸಿದರೆ ಜೀವನದಲ್ಲಿ ಏಳಿಗೆ ಹೊಂದಿತ್ತೇವೆ.
ಶಾಸ್ತ್ರದ ಪ್ರಕಾರ ಹಳದಿ ಬಣ್ಣ ಗುರುತ್ವಾಕರ್ಷಣೆಯ ಸಂಕೇತಿಸುತ್ತದೆ. ಇದು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ಸಂಧಿವಾತವನ್ನು ನಿವಾರಿಸಲು ಇದು ಪ್ರಯೋಜನಕಾರಿಯಾಗಿದೆ. ಹಸಿರು ಬಣ್ಣ ಶಾಂತ ಪ್ರವೃತ್ತಿ ಮತ್ತು ಸಂತೋಷದ ಸಂಕೇತ. ಈ ಬಣ್ಣವು ಹೃದ್ರೋಗಕ್ಕೆ ಸಹಕಾರಿಯಾಗಿದೆ.
ಕೆಂಪು ಬಣ್ಣ ಉತ್ತೇಜಕ ಬಣ್ಣವಾಗಿದೆ. ಇದು ಕಡಿಮೆ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ. ಗುಲಾಬಿ ಬಣ್ಣವು ದೈಹಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಈ ಬಣ್ಣವನ್ನು ದೌರ್ಬಲ್ಯ ಮತ್ತು ಮಲಬದ್ಧತೆಗೆ ಸಹಾಯಕವೆಂದು ಪರಿಗಣಿಸಲಾಗಿದೆ.