Webdunia - Bharat's app for daily news and videos

Install App

ಗರುಡ ಪುರಾಣ ಪ್ರಕಾರ ಮನುಷ್ಯರು ತಮ್ಮ ಕರ್ಮಗಳಿಗನುಸಾರವಾಗಿ ಹೇಗೆ ಸಾಯುತ್ತಾರೆ ಗೊತ್ತಾ..?

Webdunia
ಬುಧವಾರ, 16 ಮೇ 2018 (06:42 IST)
ಬೆಂಗಳೂರು : ಭೂಮಿ ಮೇಲೆ ಜನಿಸಿದ ಪ್ರತಿ ಜೀವಿ ಯಾವಾಗಾದರೂ ಒಮ್ಮೆ, ಯಾವುದೋ ಒಂದು ವಿಧದಲ್ಲಿ ಸಾಯಲೇಬೇಕು. ಮರಣ ಎನ್ನುವುದು ಹುಟ್ಟಿದ ಪ್ರತಿ ಜೀವಿಗೂ ಇರುತ್ತದೆ. ಅದು ಮನುಷ್ಯರಿಗಾದರೂ ಅಷ್ಟೇ, ಇತರೆ ಜೀವಿಗಳಿಗಾದರೂ ಅಷ್ಟೇ, ಹುಟ್ಟಿದ ಮೇಲೆ ಸಾಯಲೇಬೇಕು. ಮನುಷ್ಯರು ತಾವು ಮಾಡುವ ಕೆಲಸಗಳನ್ನು ಅವಲಂಭಿಸಿ ಕರ್ಮದ ಪ್ರಕಾರ ಹೇಗೆ ಸಾಯುತ್ತಾರೆ ಎಂಬುದನ್ನು ಗರುಡ ಪುರಾಣ ಹೇಳುತ್ತದೆ. ಅದರ ಬಗ್ಗೆ ಈಗ ತಿಳಿದುಕೊಳ್ಳೋಣ..

1. ಯಾವುದೇ ತಪ್ಪುಗಳನ್ನು ಮಾಡದವರು, ಧರ್ಮದ ಪ್ರಕಾರ ನಡೆದುಕೊಳ್ಳುವವರು, ಮಾನವತ್ವ ಉಳ್ಳವರು, ಒಳ್ಳೆಯವರು ಯಾರೇ ಆಗಲಿ ಯಾವುದೇ ನೋವು, ಭಯ, ನರಳಾಟ ಇಲ್ಲದೆ ಹಾಯಾಗಿ ಸಾಯುತ್ತಾರಂತೆ. ಇವರಿಗೆ ತುಂಬಾ ಒಳ್ಳೆಯ ಮರಣ ಬರುತ್ತದೆ.

 

2. ಇತರರನ್ನು ಮೋಸ ಮಾಡುವವರು, ಇತರರ ಸಂಪತ್ತನ್ನು ದೋಚುವವರು ಸುಲಭವಾಗಿ, ಅಷ್ಟು ಬೇಗ ಸಾಯಲ್ಲವಂತೆ. ಅವರು ಮುಂಚಿತವಾಗಿ ಅಂದರೆ ಸಾಯುವ ಮುನ್ನ ಅಪಸ್ಮಾರ ಸ್ಥಿತಿಗೆ ತಲುಪುತ್ತಾರೆ. ಆ ಬಳಿಕ ತುಂಬಾ ಸಮಯಕ್ಕೆ ಸಾಯುತ್ತಾರೆ. ಆ ನೋವು ಅನುಭವಿಸಿದ ಹೊರತು ಅವರು ಸಾಯಲ್ಲವಂತೆ.

 

3. ಜತೆಯಲ್ಲಿರುವವರನ್ನು, ಇತರೆ ಜೀವಿಗಳನ್ನು ಹಿಂಸಿಸುವವರು ತುಂಬಾ ನೋವು, ನರಳಾಟ ಅನುಭವಿಸಿ ಸಾಯುತ್ತಾರಂತೆ. ಸಾಯುವ ಮುನ್ನ ಬಹಳ ಹೊತ್ತು ಆ ನೋವನ್ನು ಅನುಭವಿಸಿಯೇ ಸಾಯುತ್ತಾರಂತೆ.

 

4. ಮನುಷ್ಯತ್ವ ಪಾಲಿಸದ ಮನುಷ್ಯರು, ಇತರೆ ಜೀವಿಗಳನ್ನು ನಿರ್ಲಕ್ಷಿಸುವವರು, ಮನುಷ್ಯರನ್ನು ಸಾಯಿಸುವವರಿಗೆ ವ್ಯಾಧಿಗಳು ಸೋಕಿ ಮಂಚ ಸೇರಿ, ನೋವನುಭವಿಸುತ್ತಾ ಸಾಯುತ್ತಾರಂತೆ.

 

5. ಇನ್ನು ಕೊನೆಯದಾಗಿ ಇನ್ನೊಂದು ಸಂಗತಿ ಏನೆಂದರೆ ಪ್ರಕೃತಿ ವಿಪತ್ತುಗಳು ಅಥವಾ ಯಾವುದಾದರೂ ಅಪಾಯಗಳು ಸಂಭವಿಸಿದಾಗ ದೊಡ್ಡ ಸಂಖ್ಯೆಯಲ್ಲಿ ಜನ ಸಾಯುತ್ತಾರಲ್ಲವೇ. ಆ ರೀತಿ ಯಾಕಾಗುತ್ತದೆಂದರೆ ಪಾಪಾತ್ಮರು ಎಲ್ಲರೂ ಒಂದೇ ಕಡೆ ಸೇರಿದಾಗ ಅವರ ಕರ್ಮ ಫಲಿಸಿ ಹೆಚ್ಚಾಗಿ ಒಂದೇ ಕಡೆ ಇದ್ದರೆ ಆಗ ಕರ್ಮ ಅವರನ್ನು ಬಿಡಲ್ಲವಂತೆ. ಹಾಗಾಗಿ ಆ ರೀತಿಯ ಅಪಘಾತಗಳಲ್ಲಿ ಬಹಳಷ್ಟು ಮಂದಿ ಒಮ್ಮೆಲೆ ಸಾಯುತ್ತಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments