ಬೆಂಗಳೂರು : ಫೆಂಗ್‍ಶುಯ್…ವಾಸ್ತು ಸಹ ಒಂದು ವಾಸ್ತುಶಾಸ್ತ್ರ. ಓದು, ಕೆರಿಯರ್, ವೈಯಕ್ತಿಕ ಜೀವನ, ಜ್ಞಾನದಂತಹ ಎಷ್ಟೋ ಅಂಶಗಳನ್ನು ಈ ವಾಸ್ತು ಪ್ರಭಾವಿಸುತ್ತದೆ. ವ್ಯಾಪಾರವಾಗಲಿ, ಉದ್ಯೋಗವಾಗಲಿ ಅದರಲ್ಲಿ ವೃದ್ಧಿ ಸಾಧಿಸಬೇಕಾದರೆ ಈ ವಾಸ್ತು ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಫೆಂಗ್‍ಶುಯ್ ವಾಸ್ತು ಪ್ರಕಾರ ಕುದುವೆ ಚಿತ್ರಗಳು ಮನೆ ಅಥವಾ ಆಫೀಸಿನಲ್ಲಿ ಇಟ್ಟುಕೊಂಡರೆ ಉದ್ಯೋಗ ಅಥವಾ ವ್ಯಾಪಾರದಲ್ಲಿ ವೃದ್ದಿ ಸಾಧಿಸಬಹುದಂತೆ.
ಫೆಂಗ್ ಷುಯ್ ಪ್ರಕಾರ ಕುದುರೆಗಳು ಶಕ್ತಿಗೆ ನಿದರ್ಶನ. ಇವು ಪಾಸಿಟೀವ್ ಶಕ್ತಿಯನ್ನು ಕೊಡುತ್ತವೆ. ಹಾಗಾಗಿ ಹಗ್ಗ ಅಥವಾ ಜೀನು ಇರುವ ಕುದುವೆ ಚಿತ್ರಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ಇದರಿಂದ ಲಕ್ ಕೂಡಿಬರುತ್ತದೆ. ಸಂಪತ್ತು ಬರುತ್ತದೆ. ಮೈಮೇಲೆ ಏನೂ ಇಲ್ಲದ ಖಾಲಿ ಕುದುರೆ ಚಿತ್ರಗಳನ್ನು ಇಟ್ಟುಕೊಳ್ಳಬಾರದು. ಇಟ್ಟರೆ ಅವು ನೆಗಟೀವ್ ಎನರ್ಜಿಗೆ ಸಂಕೇತಗಳು ಆದಕಾರಣ ಅದೇ ಎನರ್ಜಿ ಪ್ರಸಾರವಾಗುತ್ತದೆ. ಇದರಿಂದ ಅದೃಷ್ಟ ಕೂಡಿಬರಲ್ಲ.
ಮನೆ ಅಥವಾ ಆಫೀಸಿನಲ್ಲಿ ದಕ್ಷಿಣ ದಿಕ್ಕಿನಲ್ಲಿ ಕುದುರೆ ಚಿತ್ರಗಳನ್ನು ಇಟ್ಟರೆ ಅದರಿಂದ ಹೆಸರು ಕೀರ್ತಿ ಬರುತ್ತದೆ. ಬಿಜಿನೆಸ್‌ನಲ್ಲಿ ಕೈಗೊಳ್ಳುವ ಪ್ರಾಜೆಕ್ಟ್‌ಗಳು ಯಶಸ್ವಿಯಾಗುತ್ತವೆ. ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.
3. ಉತ್ತರ ದಿಕ್ಕಿನಲ್ಲಿ ಕುದುರೆ ಚಿತ್ರಗಳನ್ನು ಇಟ್ಟರೆ ಕೆರಿಯರ್ ಪರವಾಗಿ ಸೆಟ್ ಆಗುತ್ತದೆ. ಆ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಆರ್ಥಿಕ ಸಮಸ್ಯೆಗಳು ಇರುವವರು ಕುದುರೆ ಚಿತ್ರಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಇದರಿಂದ ಲಕ್ ಸಹ ಕೂಡಿಬಂದು ಅಂದುಕೊಂಡ ಕೆಲಸಗಳು ನೆರವೇರುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ