Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾಸ್ತು ಪ್ರಕಾರ ಸ್ಟಡಿ ರೂಂ ಈ ರೀತಿ ಇದ್ದರೆ, ನಿಮ್ಮ ಮಕ್ಕಳು ಓದಿ ವಿದ್ಯಾವಂತರಾಗುತ್ತಾರಂತೆ!

ವಾಸ್ತು  ಪ್ರಕಾರ ಸ್ಟಡಿ ರೂಂ ಈ ರೀತಿ ಇದ್ದರೆ,  ನಿಮ್ಮ ಮಕ್ಕಳು ಓದಿ ವಿದ್ಯಾವಂತರಾಗುತ್ತಾರಂತೆ!
ಬೆಂಗಳೂರು , ಸೋಮವಾರ, 9 ಏಪ್ರಿಲ್ 2018 (06:32 IST)
ಬೆಂಗಳೂರು : ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಹಂಬಲ ಎಲ್ಲಾ ಪೋಷಕರಿಗೂ  ಇದ್ದೇ ಇರುತ್ತದೆ. ಹಾಗಾದ್ರೆ ನಿಮ್ಮ ಮಕ್ಕಳು ಓದುವ ಕೋಣೆಯನ್ನು ವಾಸ್ತು ಪ್ರಕಾರ ನಿರ್ಮಿಸಿ ಇದು ನಿಮ್ಮ ಮಕ್ಕಳ ಓದಿನ ಮೇಲೆ  ಉತ್ತಮ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಸ್ಟಡಿ ರೂಂ ಹೇಗಿರಬೇಕೆಂಬುದನ್ನು ತಿಳಿಸಲಾಗಿದೆ.


*ಮಕ್ಕಳು ಅಭ್ಯಾಸ ಮಾಡುವ ಸ್ಥಳ ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಈ ದಿಕ್ಕಿನಲ್ಲಿ ಏಕಾಗ್ರತೆ ಹೆಚ್ಚುವ ಜೊತೆಗೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆ.

*ಮಕ್ಕಳು ಓದಲು ಬಳಸುವ ಟೇಬಲ್ ಚೌಕಾಕಾರವಾಗಿರಬೇಕು.

*ಅಧ್ಯಯನದ ರೂಂನಲ್ಲಿ ಕನ್ನಡಿಯಿರಬಾರದು. ಇದು ಮಕ್ಕಳ ಏಕಾಗ್ರತೆಯನ್ನು ಕಸಿದುಕೊಳ್ಳುತ್ತದೆ.

*ಓದುವ ಟೇಬಲ್ ಮನೆಯ ಬಾಗಿಲಿನ ಮುಂದೆ ಇರಬಾರದು. ಇದು ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ.

*ಓದುವ ಕೋಣೆಯಲ್ಲಿ ನೈಸರ್ಗಿಕ ಬೆಳಕು ಇರಬೇಕು. ಗಾಳಿ ಮತ್ತು ಬೆಳಕು ಸಾಕಷ್ಟಿರುವ ರೂಂನಲ್ಲಿ ಮಕ್ಕಳು ಅಭ್ಯಾಸ ಮಾಡಬೇಕು.

*ವಾಸ್ತು ಶಾಸ್ತ್ರದ ಪ್ರಕಾರ ಓದುವ ಸ್ಥಳದಲ್ಲಿ ಸ್ಟಡಿ ದೀಪವಿರಬೇಕು. ಈ ದೀಪದಲ್ಲಿ ಓದಿದ್ರೆ ಗಮನ ಪುಸ್ತಕದ ಮೇಲೆ ಮಾತ್ರ ಇರುತ್ತದೆ.

*ಸ್ಟಡಿ ರೂಂನಲ್ಲಿ ಶೌಚಾಲಯವಿರಬಾರದು. ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿರುವ ಸ್ಟಡಿ ರೂಂ ಒತ್ತಡಕ್ಕೆ ಕಾರಣವಾಗುತ್ತದೆ.

*ಅಧ್ಯಯನ ನಡೆಸುವ ರೂಂ ಗೋಡೆ ಬಣ್ಣ ಗಾಢವಾಗಿರಬಾರದು. ಬಿಳಿ, ಕಂದು ಬಣ್ಣದ ಗೋಡೆ ಒಳ್ಳೆಯದು.

*ಅಧ್ಯಯನದ ರೂಂನಲ್ಲಿ ಪ್ರಾಣಿ-ಪಕ್ಷಿಗಳ ಫೋಟೋ ಇಡಬಾರದು. ಹಾಗೆ ಚಪ್ಪಲಿ, ಶೂ ಹಾಕಿಕೊಂಡು ಅಧ್ಯಯನ ನಡೆಸಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸರಳ ಉಪಾಯ ಇಲ್ಲಿದೆ ನೋಡಿ!