ಬೆಂಗಳೂರು: 2017 ರಲ್ಲಿ ಭಾರತೀಯ ಮಹಿಳೆಯರು ಪುರುಷರನ್ನು ಮೀರಿಸುವ ಸಾಧನೆ ಮೆರೆದಿದ್ದಾರೆ. ಪಿವಿ ಸಿಂಧು, ಹರ್ಮನ್ ಪ್ರೀತ್ ಕೌರ್ ಭಾರತದ ಹೊಸ ಮಹಿಳಾ ಸೂಪರ್ ಸ್ಟಾರ್ ಗಳಾದರು.
ಮಹಿಳಾ ವಿಶ್ವಕಪ್ ಕ್ರಿಕೆಟ್: ಜೂನ್ ನಲ್ಲಿ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಮಹಿಳೆಯರೂ ಹೊಸ ಇತಿಹಾಸ ಬರೆದರು. ಇಷ್ಟು ದಿನ ಮಹಿಳಾ ಕ್ರಿಕೆಟಿಗರನ್ನು ಗುರುತಿಸುವವರೇ ಇರಲಿಲ್ಲ. ಆದರೆ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಹಿಳೆಯರು ಫೈನಲ್ ವರೆಗೆ ತಲುಪಿದರು. ಹರ್ಮನ್ ಪ್ರೀತ್ ಸಿಂಗ್ ಕೌರ್ ರಂತಹ ಸೆನ್ಸೇಷನಲ್ ಆಟಗಾರ್ತಿಯರ ಪರಿಚಯವಾಯಿತು. ಮಿಥಾಲಿ ರಾಜ್ ನಾಯಕತ್ವಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು.
ಪಿವಿ ಸಿಂಧು ಎಂಬ ಬೆಳ್ಳಿ ತಾರೆ: ಪಿವಿ ಸಿಂಧು 2016 ರಲ್ಲಿ ಶುರು ಮಾಡಿದ್ದ ಗೆಲುವಿನ ಅಭಿಯಾನವನ್ನು ಇಲ್ಲಿಯೂ ಮುಂದುವರಿಸಿದರು. ವಿಶ್ವ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದರು. ಇಂಡಿಯಾ, ಕೊರಿಯಾ ಓಪನ್ ಸೀರೀಸ್ ಚಾಂಪಿಯನ್ ಆದರೆ ಹಾಂಗ್ ಕಾಂಗ್ ಓಪನ್ ಸೀರೀಸ್ ನಲ್ಲಿ ರನ್ನರ್ ಅಪ್ ಆದರು.
ಸೈನಾ ನೆಹ್ವಾಲ್: ಸೈನಾ ನೆಹ್ವಾಲ್ ಈ ವರ್ಷ ಮತ್ತೆ ತಮ್ಮ ಹಳೆಯ ಕೋಚ್ ಗೋಪಿಚಂದ್ ಜತೆ ಹಳೆಯ ವೈಮನಸ್ಯ ಮರೆತು ಒಂದುಗೂಡಿದರು. ಈ ವರ್ಷ ಸೈನಾ ಮಲೇಷ್ಯಾ ಮಾಸ್ಟರ್ ಚಾಂಪಿಯನ್ ಆದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ