ಬೆಂಗಳೂರು: 2017 ಕರ್ನಾಟಕದ ಪಾಲಿಗೆ ಬೇಡದ ಕಾರಣಗಳಿಗೆ ಸುದ್ದಿಯಾದ ವರ್ಷ. ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗಳು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಇತ್ಯಾದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಘಟನೆಗಳು.
ಹಾಗೆ ನೋಡಿದರೆ ಈ ವರ್ಷ ಮಂಗಳೂರು, ಕರಾವಳಿ ಭಾಗದಲ್ಲಿ ಹೆಚ್ಚು ಕೋಮು ಗಲಭೆಗಳಾದವು. ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಮಂಗಳೂರು, ಬಂಟ್ವಾಳದಲ್ಲಿ ದೊಡ್ಡ ಮಟ್ಟಿನ ಪ್ರತಿಭಟನೆಗಳಾದವು. ಇತ್ತೀಚೆಗೆ ಪರೇಶ್ ಮೇಸ್ತ ಸಾವಿಗೀಡಾದಾಗ ಉತ್ತರ ಕರ್ನಾಟಕ ಪ್ರಕ್ಷುಬ್ಧವಾಗಿತ್ತು.
ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ರನ್ನು ಅವರ ಮನೆ ಎದುರೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಆ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಇದರ ನಡುವೆ ಸುನಿಲ್ ಹೆಗ್ಗರವಳ್ಳೆ ಕೊಲೆ ಸುಪಾರಿ ಪ್ರಕರಣದಲ್ಲಿ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಬಂಧನವಾಗಿದೆ.
ಇದಲ್ಲದೆ, ಖಾಸಗಿ ವೈದ್ಯಕೀಯ ಮಸೂದೆ ಮಂಡಿಸಲು ಹೊರಟ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಖಾಸಗಿ ವೈದ್ಯರು ಧರಣಿ ನಡೆಸಿದ ಪರಿಣಾಮ ಸುಮಾರು 50 ಮಂದಿ ಪ್ರಾಣ ತೆರಬೇಕಾಯಿತು.
ಇದು ಸಾಲದೆಂಬಂತೆ ದುರ್ಘಟನೆಗಳಲ್ಲಿ ಸಾವನ್ನಪ್ಪಿದವರು ಇನ್ನಷ್ಟು ಮಂದಿ. ಬೆಳಗಾವಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಕೊಳವೆ ಬಾವಿಗೆ ಬಿದ್ದು ಕಾವೇರಿ ಎನ್ನುವ ಪುಟ್ಟ ಬಾಲಕಿ ಪ್ರಾಣ ಬಿಟ್ಟಿದ್ದಳು. ಈಕೆಗಾಗಿ ಇಡೀ ರಾಜ್ಯವೇ ಬದುಕಿ ಬರಲೆಂದು ಪ್ರಾರ್ಥಿಸಿದರೂ ಪ್ರಯೋಜನವಾಗಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ