ಹೃದಯ ಬಡಿತಕ್ಕೆ ಕಡಿಮೆಯಾಗಲು ಕಾರಣಗಳು

ಆರೋಗ್ಯವಂತಹ ಮನುಷ್ಯನ ಹೃದಯ ನಿಮಿಷಕ್ಕೆ 60 ರಿಂದ 100 ರೊಳಗೆ ಇರಬೇಕು. ಒಂದು ವೇಳೆ 60 ಕ್ಕಿಂತ ಕಡಿಮೆಯಾಗಿದೆ ಎಂದರೆ ಹೃದಯ ಬಡಿತ ನಾರ್ಮಲ್ ಆಗಿಲ್ಲ ಎಂದರ್ಥ. ಹೃದಯ ಬಡಿತ ಕಡಿಮೆಯಾಗಲು ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ.

credit: social media

ಹೃದಯ ಬಡಿತ ಕಡಿಮೆಯಾದಾಗ ಸುಸ್ತಾಗುವುದು, ತಲೆ ತಿರುಗಿದಂತಾಗುವುದು ಇತ್ಯಾದಿ ಸಮಸ್ಯೆಯಾಗಬಹುದು

ಉಸಿರಾಡಲು ಕಷ್ಟವಾಗುವುದು, ಉಸಿರು ಕಟ್ಟಿದಂತಾಗುವುದು ಮತ್ತು ಕೆಲವೊಮ್ಮೆ ಎದೆನೋವೂ ಬರಬಹುದು

ಹೃದಯ ಬಡಿತ ಕಡಿಮೆಯಾಗಲು ಬೇರೆ ರೋಗಕ್ಕೆ ತೆಗೆದುಕೊಳ್ಳುವ ಔಷಧಿಗಳು ಕಾರಣವಾಗಬಹುದು

ಹೃದಯಕ್ಕೆ ಸಂಬಂಧಿಸಿದ ಕೆಲವೊಂದು ರೋಗದ ಆರಂಭಿಕ ಲಕ್ಷಣವೂ ಆಗಿರಬಹುದು

ಕೆಲವರಿಗೆ ಹುಟ್ಟಿನಿಂದಲೇ ಹೃದಯ ಬಡಿತದಲ್ಲಿ ಏರುಪೇರಾಗುವ ಸಮಸ್ಯೆ ಕಂಡುಬರುತ್ತದೆ

ಸರಿಯಾಗಿ ನಿದ್ರೆ, ವಿಶ್ರಾಂತಿ ಇಲ್ಲದೇ ಇರುವುದರಿಂದಲೂ ಹೃದಯ ಬಡಿತ ಕಡಿಮೆಯಾಗುವ ಅಪಾಯವಿದೆ

ಇಂತಹ ಯಾವುದೇ ಸಮಸ್ಯೆಯಿದ್ದರೂ ತಕ್ಷಣವೇ ತಜ್ಞ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಪ್ರತಿನಿತ್ಯ ವಾಕಿಂಗ್ ಮಾಡುವುದರ ಪ್ರಯೋಜನಗಳು

Follow Us on :-