ಐದೇ ವಸ್ತು ಬಳಸಿ ಮಾಡುವ ದಿಡೀರ್ ಸ್ವೀಟ್

ಮನೆಗೆ ನೆಂಟರು ಬರುತ್ತಾರೆಂದರೆ ದಿಡೀರ್ ಆಗಿ ಮಾಡಬಹುದಾದ ಸ್ವೀಟ್ ಇದು. ಇದಕ್ಕೆ ಕೇವಲ ಐದೇ ವಸ್ತು ಸಾಕು. ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಬಾಣಲೆಗೆ 1 ಕಪ್ ಮೈದಾ, 1 ಕಪ್ ಕಡಲೆಹಿಟ್ಟು ಹಾಕಿ

ಇದಕ್ಕೆ ನಾಲ್ಕು ಸ್ಪೂನ್ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ

ಈಗ ಅರ್ಧಕಪ್ ನಷ್ಟು ಹಾಲು ಸೇರಿಸಿ ಸ್ಟವ್ ಆನ್ ಮಾಡಿ ಕಲಸಿ

ಇದು ಪಾಕ ಬರುವಾಗ ಸಕ್ಕರೆ ಪೌಡರ್, ಏಲಕ್ಕಿ ಪೌಡರ್ ಸೇರಿಸಿ ಗಟ್ಟಿ ಪಾಕ ಮಾಡಿ

ಈಗ ಇದನ್ನು ತುಪ್ಪ ಸವರಿದ ಬಟ್ಟಲಿಗೆ ಹಾಕಿ ಆರಲು ಬಿಡಿ

ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿಕೊಂಡರೆ ದಿಡೀರ್ ಸ್ವೀಟ್ ರೆಡಿ

Photo Credit: Instagram

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಕಹಿಯೇ ಆಗದಂತೆ ಹಾಗಲಕಾಯಿ ಫ್ರೈಮಾಡಿ

Follow Us on :-