ಉದ್ದಿನ ಹಿಟ್ಟು ಇಲ್ಲದೇ ಚಕ್ಕುಲಿ ಮಾಡುವ ವಿಧಾನ

ಉದ್ದಿನ ಹಿಟ್ಟು ಇಲ್ಲದೇ ಅವಲಕ್ಕಿ ಬಳಸಿ ಚಕ್ಕುಲಿ ಮಾಡಬಹುದು. ಸಂಜೆ ಚಹಾ ಜೊತೆ ತಿನ್ನಲು ಯೋಗ್ಯವಾದ ಚಕ್ಕುಲಿ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ಅವಲಕ್ಕಿ ಮತ್ತು ಹುರಿಗಡಲೆಯನ್ನು ಸಮಪ್ರಮಾಣದಲ್ಲಿ ಹಾಕಿ ಹುರಿಯಿರಿ

ಈಗ ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡು ಅಕ್ಕಿ ಹಿಟ್ಟು ಸೇರಿಸಿ

ಇದಕ್ಕೆ ಒಂದು ಸೌಟಿನಷ್ಟು ಎಣ್ಣೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ

ಈಗ ಇದಕ್ಕೆ ಖಾರದಪುಡಿ, ಜೀರಿಗೆ, ಅರಿಶಿನ ಉಪ್ಪು ಸೇರಿಸಿ ಕಲಸಿಕೊಳ್ಳಿ

ಇದಕ್ಕೆ ಸ್ವಲ್ಪವೇ ನೀರು ಹಾಕಿ ಹಿಟ್ಟು ರೆಡಿ ಮಾಡಿಕೊಳ್ಳಿ

ಇದನ್ನು ಉಂಡೆ ಕಟ್ಟಿಕೊಂಡು ರೆಡಿ ಮಾಡಿ

ಈಗ ಚಕ್ಕುಲಿ ಅಚ್ಚಿಗೆ ಹಾಕಿ ಚಕ್ಕುಲಿ ಮಾಡಿ ಎಣ್ಣೆಗೆ ಹಾಕಿ ಫ್ರೈ ಮಾಡಿ

ಬೀಜ ಬಾರದಂತೆ ಆಪಲ್ ಕಟ್ ಮಾಡಲು ಇಲ್ಲಿದೆ ಐಡಿಯಾ

Follow Us on :-