Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೋಂಕಿಗೆ ತುತ್ತಾದವರಲ್ಲಿ ಯುವಕರೇ ಹೆಚ್ಚು ಎಂಬುದು ಆತಂಕಕಾರಿ!

ಸೋಂಕಿಗೆ ತುತ್ತಾದವರಲ್ಲಿ ಯುವಕರೇ ಹೆಚ್ಚು ಎಂಬುದು ಆತಂಕಕಾರಿ!
ಬೆಂಗಳೂರು , ಸೋಮವಾರ, 10 ಜನವರಿ 2022 (08:04 IST)
ಬೆಂಗಳೂರು : ಬೆಂಗಳೂರಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈಗಾಗಗಲೇ 3ನೇ ಅಲೆ ಪ್ರಾರಂಭವಾಗುತ್ತಿದೆ ಎಂಬ ಭೀತಿಯಲ್ಲಿ ಜನರಿದ್ದಾರೆ.

ಈ ಸಲ ಕೊರೊನಾ ಸೋಂಕಿಗೆ ಯುವ ಜನಾಂಗ ಹೆಚ್ಚು ತುತ್ತಾಗುತ್ತಿರುವ ಆಘಾತಕಾರಿ ವಿಷಯ ಹೊರಬಂದಿದೆ.

ಎರಡನೇ ಅಲೆ ವೇಳೆಯಲ್ಲಿ ಕೊರೊನಾ ಸೋಂಕಿಗೆ ಯುವಕರೇ ಹೆಚ್ಚು ತುತ್ತಾಗಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ಯುವಜನತೆ ಹೆಚ್ಚು ಸೋಂಕು ಪತ್ತೆ ಆಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಬೆಂಗಳೂರು ನಗರದಲ್ಲಿ ಈಗಾಗಲೇ 32 ಸಾವಿರ ಸಕ್ರಿಯ ಕೇಸ್ಗಳಿವೆ. ಅದರಲ್ಲಿ 20 ಸಾವಿರ ಸೋಂಕಿತರು ಯುವಜನತೆ ಆಗಿದ್ದಾರೆ. ಮೂರನೇ ಅಲೆಯಲ್ಲಿ 20-39 ವರ್ಷದೊಳಗಿನ ಯುವಕರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದಾರೆ. ಪ್ರತಿದಿನ ನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಯುವಕರಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದೆ..

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯರು, ವಿಕಲಚೇತನರು ಮನೆಯಿಂದ್ಲೇ ಸರ್ಕಾರಿ ಕೆಲಸ ಮಾಡ್ಬೋದು! ಹೇಗೆ ಗೊತ್ತ?