Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೈಟ್ ಕಫ್ರ್ಯೂ ಆದೇಶ ಹಿಂಪಡೆದ ಕಾರಣವಾದ್ರು ಏನು?

ನೈಟ್ ಕಫ್ರ್ಯೂ ಆದೇಶ ಹಿಂಪಡೆದ ಕಾರಣವಾದ್ರು ಏನು?
ಬೆಂಗಳೂರು , ಶುಕ್ರವಾರ, 5 ನವೆಂಬರ್ 2021 (17:35 IST)
ಕೊರೊನಾ ಹಿನ್ನೆಲೆ ವಿಧಿಸಲಾಗಿದ್ದ, ನೈಟ್ ಕರ್ಫ್ಯೂನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು. ಕೊರೊನಾ ತೀವ್ರತೆ ಕಡಿಮೆಯಾದ ಹಿನ್ನೆಲೆ ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.
ನಗರದಲ್ಲಿ ಕುದುರೆ ಓಟಗಳನ್ನು ಸಹ ನಡೆಸಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಸ್ಥಳಾವಕಾಶದ ಸಾಮರ್ಥ್ಯದಷ್ಟು ಮಾತ್ರ ಕುದುರೆ ಓಟದ ಪೋಷಕರು ಕುದುರೆ ಓಟಗಳಲ್ಲಿ ಭಾಗವಹಿಸತಕ್ಕದು. ಪೂರ್ಣವಾಗಿ ಕೋವಿಡ್ ಲಸಿಕೆ ಪಡೆದುಕೊಂಡವರು ಮಾತ್ರ ಭಾಗವಹಿಸಬಹುದಾಗಿದೆ.
ರಾಜ್ಯದಲ್ಲಿ ಕೊರೊನಾ ಪಸರಿಸುವ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಒಂದೊಂದೆ ವಲಯಗಳಿಗೆ ವಿನಾಯ್ತಿ ನೀಡುತ್ತಿದೆ, ಕಳೆದ ಎರಡ್ಮೂರು ತಿಂಗಳಿನಿಂದ ನೈಟ್ ಕರ್ಫ್ಯೂ ತೆರವುಗೊಳಿಸಬೇಕೆಂದು ವ್ಯಾಪಾರಸ್ಥರು ಮನವಿ ಮಾಡಿಕೊಂಡಿದ್ದರು. ಇದೀಗ ವ್ಯಾಪಾರಿಗಳು ಮನವಿಯನ್ನು ಸಮ್ಮತಿಸಿರುವ ರಾತ್ರಿ ಕರ್ಫ್ಯೂ ರದ್ದು ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಪ್ರಿಯರೇ ಎಚ್ಚರಾ…!