Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷತೆಗಳೇನು?

ಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷತೆಗಳೇನು?
ಬೆಂಗಳೂರು , ಬುಧವಾರ, 6 ಸೆಪ್ಟಂಬರ್ 2023 (07:06 IST)
ಕೃಷ್ಣ ಜನ್ಮಾಷ್ಟಮಿ ದೇಶಾದ್ಯಂತ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ ಹಾಗೂ ಇದನ್ನು ವೈಭವದಿಂದ ಆಚರಿಸಲಾಗುತ್ತದೆ.
 
ಆಚರಣೆ ಎಲ್ಲಿ, ಹೇಗೆ?
ಈ ದಿನ ಕೃಷ್ಣಜನ್ಮಾಷ್ಟಮಿ ಹಬ್ಬವಾಗಿದ್ದು, ಇದನ್ನು ಎಲ್ಲೆಡೆ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಉಡುಪಿಯ ಕೃಷ್ಣ ಮಠದಲ್ಲಿ ಅತ್ಯಂತ ಅದ್ದೂರಿಯಿಂದ ಕೃಷ್ಣನ ಅಷ್ಟಮಿಯನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಎಲ್ಲಾ ಕೃಷ್ಣನ ಮಂದಿರದಲ್ಲಿ ಕೂಡ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಎಲ್ಲಾ ಕಡೆ ಸಾಂಪ್ರದಾಯಿಕ ಆಟಗಳು, ಚಿಕ್ಕ ಮಕ್ಕಳಿಗೆ ರಾಧಾ ಕೃಷ್ಣನ ಅಲಂಕಾರ ಮಾಡಿ ನೋಡುವುದೇ ಈ ಒಂದು ಹಬ್ಬದ ವಿಶೇಷ.

ಪುರಾಣದಲ್ಲೇನಿದೆ?
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.

ಕೃಷ್ಣ ತ್ಯಾಗಮಯಿ
ಶ್ರೀಕೃಷ್ಣನ ಬಗ್ಗೆ ಎಲ್ಲರಿಗೂ ಗೌರವ ಹೆಚ್ಚು ಏಕೆಂದರೆ ಆತನ ತ್ಯಾಗ ಮನೋಭಾವದಿಂದ. ಎಷ್ಟೇ ರಾಜರನ್ನು ಗದ್ದರೂ ಗದ್ದುಗೆ ಏರಲಿಲ್ಲ. ಉದಾ-ಕಂಸನನ್ನು ಕೊಂದು ಅವನ ತಂದೆ ಉಗ್ರಸೇನನಿಗೆ ಮಥುರಾ ಪಟ್ಟ ಕಟ್ಟಿದ.

ಜರಾಸಂಧನನ್ನು ಕೊಂದು ಅವನ ಮಗ ಸಾಲ್ವನಿಗೆ ಪಟ್ಟಕಟ್ಟಿದ. ಸತ್ಯ ಧರ್ಮಮೀರಿದವರು ಬಂಧುಗಳಾದರೂ ಶಿಕ್ಷಾರ್ಹರು ಎಂಬ ನೀತಿಯನ್ನು ಮಾವ ಕಂಸ, ಭಾವ ಶಿಶುಪಾಲ, ಅಜ್ಜ ಮಾಗಧ ಮುಂತಾದವರನ್ನು ವಧಿಸುವ ಮೂಲಕ ತೋರಿಸಿದ್ದಾನೆ.

ಇಷ್ಟೆಲ್ಲಾ ಆದರೂ ಶ್ರೀಕೃಷ್ಣನ ನಯ-ವಿನಯ ಅನುಕರಣೀಯ. ರಾಜ ಯಾಗದಲ್ಲಿ ಆತ ಬ್ರಾಹ್ಮಣರ ಹಾಗೂ ಹಿರಿಯರ ಕಾಲು ತೊಳೆಯುತ್ತಾನೆ. ಇಂತಹ ದೊಡ್ಡ ಗುಣದಿಂದಲೇ ಅವನಿಗೆ ಆ ಯಾಗದ ದೊಡ್ಡ ಸ್ಥಾನವಾದ ‘ಅಗ್ರಪೂಜೆ’ ಲಭಿಸಿತು. ನಂಬಿ ಕರೆದರೆ ‘ಓ’ ಎಂದು ಓಡಿ ಬಂದು ಉದ್ಧರಿಸುವುದು ಅವನ ವೈಶಿಷ್ಟ್ಯ.


Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಪ್ರಾಣಿ ವಧೆ,ಮಾಂಸ ಮಾರಾಟ ಸಂಪೂರ್ಣನಿಷೇಧ