ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಂದ ಶಿಫಾರಸು ನವೆಂಬರ್ 1ರಂದು ನಡೆಯುವ ರಾಜ್ಯೋತ್ಸವಕ್ಕೆ ನಿಯಮಾವಳಿ ಸೂಚಿಸಲಾಗಿದೆ.ಹೊರಾಂಗಣ ಕಾರ್ಯಕ್ರಮಗಳಲ್ಲಿ ಜನ ಸೇರ್ಪಡೆಗೆ ನಿರ್ಬಂಧ ವಿಧಿಸಿ ಸೂಚನೆ ಕೊಡಲಾಗಿದೆ. 500ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಕಾರ್ಯಕ್ರಮಕ್ಕೆ ಬರುವವರಿಗೆ 2 ಡೋಸ್ ಲಸಿಕೆ ಆಗಿರಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕಡ್ಡಾಯವಾಗಿ ಸ್ಯಾನಿಟೈಸೇಷನ್ ಮಾಡಲೇಬೇಕು. ಎಲ್ಲರೂ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಕೊವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ನಿಯಮ ಶಿಫಾರಸು ಮಾಡಲಾಗಿದೆ.