Webdunia - Bharat's app for daily news and videos

Install App

ತಮಿಳುನಾಡಿಗೆ ನೀರು: ಇಂದು ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ

Webdunia
ಬುಧವಾರ, 6 ಸೆಪ್ಟಂಬರ್ 2023 (09:19 IST)
ಮಂಡ್ಯ : ಸಾಕಷ್ಟು ಕುತೂಹಲ ಮೂಡಿಸಿರುವ ಕಾವೇರಿ ನೀರಿನ ಸಮಸ್ಯೆಯ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ಈ ಮಹತ್ವದ ವಿಚಾರಣೆಯ ತೀರ್ಪಿಗೆ ಕಾವೇರಿ ತಾಯಿಯ ಮಕ್ಕಳು ಎದುರು ನೋಡ್ತಾ ಇದ್ದಾರೆ.
 
ಮುಂಗಾರು ಮಳೆ ಕೊರತೆಯಿಂದ ಕಾವೇರಿ ನದಿ ಅಕ್ಷರಶಃ ಒಣಗಿನಿಂತಿದೆ. ಕಾವೇರಿಯ ಒಡಲು ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ನೆಲಕ್ಕೆ ಮುಟ್ಟುತ್ತಿದೆ. ಸದ್ಯ ಕೆಆರ್ ಎಸ್ ನೀರಿನ ಮಟ್ಟ 98.86 ಅಡಿಗೆ ಕುಸಿದಿದ್ದು, ಕಾವೇರಿ ಕೊಳ್ಳ ವ್ಯಾಪ್ತಿಯ ಜನರಿಗೆ ಭೀಕರ ಜಲಕ್ಷಾಮ ಎದುರಾಗೋ ಭೀತಿ ಶುರುವಾಗಿದೆ.

ಈ ಮಧ್ಯೆ ಪಕ್ಕದ ತಮಿಳುನಾಡು ಸಂಕಷ್ಟ ಸೂತ್ರ ಅನುಸರಿಸದೇ ನೀರು ಕೇಳುತ್ತಿದೆ. ಸಿಡಬ್ಲ್ಯೂಎಂಎ ಆದೇಶಕ್ಕೂ ತೃಪ್ತಿಕಾಣದ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ.

ಕಾವೇರಿ ವಿಚಾರವಾಗಿ ಸಲ್ಲಿಕೆಯಾಗಿರುವ ನಾಲ್ಕು ಅರ್ಜಿಗಳನ್ನು ಇಂದು ಪರಿಶೀಲನೆ ಮಾಡಲಿರೋ ಸರ್ವೋಚ್ಛ ನ್ಯಾಯಾಲಯ ಇಂದೇ ಮಧ್ಯಂತರ ತೀರ್ಪು ನೀಡೋ ಸಾಧ್ಯತೆ ಇದೆ. ಜೂನ್, ಜುಲೈ, ಆಗಸ್ಟ್ ತಿಂಗಳ 80 ಟಿಎಂಸಿ ನೀರು ಬಿಟ್ಟಿಲ್ಲ ಎಂದು ತಮಿಳುನಾಡು ಅರ್ಜಿ ಸಲ್ಲಿಸಿದ್ರೆ, ಇತ್ತ ಕರ್ನಾಟಕವೂ ಪ್ರತಿ ದಾವೆ ಹೂಡಿದ್ದು, ಮುಂಗಾರು ಮಳೆ ಕೈಕೊಟ್ಟಿದೆ.

ಕೆಆರ್ಎಸ್, ಕಬಿನಿ, ಹೇಮಾವತಿ, ಹಾರಂಗಿ ಡ್ಯಾಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ತುಂಬಿಲ್ಲ. ಹೀಗಿದ್ರು ಸಹ ಮೂರು ತಿಂಗಳಿಂದ ಇಲ್ಲಿಯವರೆಗೆ 35 ಟಿಎಂಸಿ ನೀರು ಬಿಟ್ಟಿದ್ದೇವೆ, ತಮಿಳುನಾಡು ಹೇಳುವಷ್ಟು ನೀರು ಬಿಟ್ಟರೆ ಇಲ್ಲಿನ ಜನರಿಗೆ ಕುಡಿಯೋ ನೀರಿಗೆ ಸಮಸ್ಯೆ ಆಗುತ್ತೆ ಎಂದು ಉಲ್ಲೇಖ ಮಾಡಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments