ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ತೀವ್ರವಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಜುಲೈ 29ರವರೆಗೂ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನುಳಿದಂತೆ ಬೆಳಗಾವಿ, ಬೀದರ್, ಹಾವೇರಿ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಅತಿಯಾದ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಸಿದ್ದಾಪುರ, ಭಾಗಮಂಡಲ, ಕ್ಯಾಸಲ್ರಾಕ್, ಗೇರುಸೊಪ್ಪ, ಯಲ್ಲಾಪುರ, ಸುಬ್ರಹ್ಮಣ್ಯ, ಕೊಟ್ಟಿಗೆಹಾರ, ನಾಪೋಕ್ಲು, ಕದ್ರಾ, ಕುಮಟಾ, ಮಂಕಿ, ಹುಂಚದಕಟ್ಟೆ, ಮೂರ್ನಾಡು, ಶಿರಾಲಿ, ಹೊನ್ನಾವರ, ಕೊಲ್ಲೂರು, ತಾಳಗುಪ್ಪ, ಸೋಮವಾರಪೇಟೆ, ಕಮ್ಮರಡಿ, ಕೊಪ್ಪ, ಉಪ್ಪಿನಂಗಡಿ, ಲಿಂಗನಮಕ್ಕಿಯಲ್ಲಿ ಅತಿಯಾದ ಮಳೆಯಾಗಿದೆ.
ಗೋಕರ್ಣ, ಮಂಚಿಕೆರೆ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ, ಮಂಗಳೂರು ವಿಮಾನ ನಿಲ್ದಾಣ, ಕಳಸ, ಜಯಪುರ, ಕಾರ್ಕಳ, ಕುಂದಾಪುರ, ಕಿರವತ್ತಿ, ಬನವಾಸಿ, ಅಂಕೋಲಾ, ತ್ಯಾಗರ್ತಿ, ಹುಡುಕೆರೆ, ಬೆಳಗಾವಿ, ಶೃಂಗೇರಿ, ಮೂಡಿಗೆರೆ, ಪಣಂಬೂರು, ಕೋಟ, ಬಾಳೆಹೊನ್ನೂರು, ಸಕಲೇಶಪುರ, ವಿರಾಜಪೇಟೆ, ಆನವಟ್ಟಿಯಲ್ಲಿ ಭಾರಿ ಮಳೆಯಾಗಿದೆ.
ಸುಳ್ಯ, ಜೋಯಿಡಾ, ಹಳಿಯಾಳ, ಹಾನಗಲ್, ಹಾರಂಗಿ, ಭದ್ರಾವತಿ, ಹಾವೇರಿ, ಅಕ್ಕಿಆಲೂರು, ಹಾವೇರಿ, ಶಿವಮೊಗ್ಗ, ಸವಣೂರು, ಹಿರೆಕೆರೂರು, ಹೊನ್ನಾಳಿ, ಕುಂದಗೋಳ, ಕಲಘಟಗಿ, ಬೈಲಹೊಂಗಲ, ಸಂಕೇಶ್ವರ, ಚಿಂಚೋಳಿ, ಬೇಲೂರು, ಶಿರಹಟ್ಟಿ, ಲಕ್ಷ್ಮೇಶ್ವರ, ಹರಪನಹಳ್ಳಿ, ಸದಲಗಾ, ಬಾಗಲಕೋಟೆ, ದಾವಣಗೆರೆ, ಹೊಸದುರ್ಗ, ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ನರಗುಂದ, ಬೆಳ್ಳೂರು, ಸಾಲಿಗ್ರಾಮ, ಕೋಲಾರ, ಬೆಂಗಳೂರು, ಗುಬ್ಬಿ, ತಿಪಟೂರು, ಕೊಟ್ಟೂರಿನಲ್ಲಿ ಮಳೆಯಾಗಿದೆ.
ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲೂ ಭಾರಿ ಮಳೆ ಸುರಿಯಲಿದೆ.