ಚೆನ್ನೈ : ಮಕ್ಕಳಿಗೆ ಅನಗತ್ಯ ಒತ್ತಡವನ್ನು ತಪ್ಪಿಸುವ ಸಲುವಾಗಿತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಇದೀಗ ಹೊಸ ಆದೇಶವೊಂದನ್ನು ಹೊರಡಸಿದೆ.
ಅದೇನೆಂದರೆ ಸಿಬಿಎಸ್ ಇ ಯ ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ನೀಡಬಾರದೆಂದು ಜೊತೆಗೆ ಈ ಹೊಸ ಅದೇಶವನ್ನು ಶಾಲೆಗಳು ಉಲ್ಲಂಘಿಸದಂತೆ ನಿಗಾ ವಹಿಸಲು ಪ್ಲೈಯಿಂಗ್ ಸ್ಕ್ವಾಡ್ ರಚಿಸಲು ಮದ್ರಾಸ್ ಹೈಕೋರ್ಟ್ ಸಿಬಿಎಸ್ ಇಗೆ ಸೂಚಿಸಿದೆ.
ಹಾಗೇ ಮುಂದಿನ ದಿನಗಳಲ್ಲಿ ಅನಗತ್ಯ ಪುಸ್ತಕಗಳನ್ನು ಬಳಕೆ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಬೇಕೆಂದು ನಿರ್ದೇಶನ ನೀಡಿರುವುದರ ಜೊತೆಗೆ ಈ ಸಂಬಂಧ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಲು ಕೇಂದ್ರ ಹಾಗೂ ರಾಷ್ಟ್ರೀಯ ಸಂಶೋಧನಾ ಮತ್ತು ತರಬೇತಿ ಮಂಡಳಿಗೆ ಮದ್ರಾಸ್ ಹೈಕೋರ್ಟ್ ಗಡುವು ವಿಧಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ