Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೆಹಲಿಯಲ್ಲಿ ಗಣೇಶ ಚತುರ್ಥಿಯ ಸಾರ್ವಜನಿಕ ಆಚರಣೆಗೆ ಅವಕಾಶ ಇಲ್ಲ

ದೆಹಲಿಯಲ್ಲಿ ಗಣೇಶ ಚತುರ್ಥಿಯ ಸಾರ್ವಜನಿಕ ಆಚರಣೆಗೆ ಅವಕಾಶ ಇಲ್ಲ
ನವದೆಹಲಿ , ಬುಧವಾರ, 8 ಸೆಪ್ಟಂಬರ್ 2021 (14:27 IST)
ನವದೆಹಲಿ : ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಹೇಳಿದೆ.

ಮಂಗಳವಾರ ಹೊರಡಿಸಿರುವ ಆದೇಶದಲ್ಲಿ, ಜಿಲ್ಲಾಧಿಕಾರಿಗಳು ಮತ್ತು ಉಪ ಪೊಲೀಸ್ ಆಯುಕ್ತರು ಗಣೇಶನ ವಿಗ್ರಹಗಳನ್ನು ಟೆಂಟ್ ಅಥವಾ ಪೆಂಡಾಲ್ನಲ್ಲಿ ಪ್ರತಿಷ್ಠಾಪಿಸದಂತೆ ನೋಡಿಕೊಳ್ಳುತ್ತಾರೆ. ಅಲ್ಲದೆ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಸ್ಥಳದಲ್ಲಿ ಜನಸಂದಣಿ ಸೇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಡಿಡಿಎಂಎ ಹೇಳಿದೆ.
ಯಾವುದೇ ಮೆರವಣಿಗೆಗೂ ಅನುಮತಿ ನೀಡಲಾಗುವುದಿಲ್ಲ. ಆದರೆ ಮನೆಯಲ್ಲಿಯೇ ಹಬ್ಬವನ್ನು ಆಚರಿಸುವಂತೆ ಡಿಡಿಎಂಎ ಜನರಿಗೆ ಸಲಹೆ ನೀಡಿದೆ.
ಈ ತಿಂಗಳು ಗಣೇಶ ಚತುರ್ಥಿಯನ್ನು ಆಚರಿಸಲಿದ್ದು, ಚಾಲ್ತಿಯಲ್ಲಿರುವ ಕೋವಿಡ್-19 ಸಾಂಕ್ರಾಮಿಕದ ಸದ್ಯದ ಪರಿಸ್ಥಿತಿ ಮತ್ತು ನಿರ್ಬಂಧಗಳನ್ನು ಪರಿಗಣಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬದ ಆಚರಣೆಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್.! 14 ವರ್ಷದ ಬಾಲಕಿ ಮೇಲೆ 13 ಮಂದಿಯಿಂದ ಅತ್ಯಾಚಾರ