Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವೈರಸ್ ಅಂತ್ಯವಾಗಿಲ್ಲ, ರೂಪಾಂತರಿ ಸಾಧ್ಯತೆ ಇದೆ : WHO

ವೈರಸ್ ಅಂತ್ಯವಾಗಿಲ್ಲ, ರೂಪಾಂತರಿ ಸಾಧ್ಯತೆ ಇದೆ : WHO
ನವದೆಹಲಿ , ಶನಿವಾರ, 12 ಫೆಬ್ರವರಿ 2022 (09:38 IST)
ನವದೆಹಲಿ : ಜಗತ್ತಿನಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಇನ್ನೂ ಕೊನೆಯಾಗಿಲ್ಲ.
 
ಕೋವಿಡ್-19 ವೈರಸ್ ಇನ್ನೂ ಹೆಚ್ಚಿನ ರೂಪಾಂತರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್   ಎಚ್ಚರಿಸಿದ್ದಾರೆ.

ಮಹಾಮಾರಿ ವೈರಸ್ ವಿಕಾಸ ಮತ್ತು ಬೆಳವಣಿಗೆಯನ್ನು ಇಡೀ ಜಗತ್ತು ಕಂಡಿದೆ. ಹಾಗಾಗಿ ಇನ್ನೂ ಹೆಚ್ಚಿನ ರೂಪಾಂತರಿಗಳು, ಅತಿ ಅಪಾಯಕಾರಿ ರೂಪಾಂತರಿಗಳು ರೂಪುಗೊಳ್ಳಬಹುದು.

ಹಾಗಾಗಿ ಇದು ಸಾಂಕ್ರಾಮಿಕದ ಅಂತ್ಯ ಅಲ್ಲ. ವೈರಸ್ನ ಅಂತ್ಯವನ್ನೂ ಯಾರೂ ಊಹಿಸಲು ಸಾಧ್ಯವಿಲ್ಲ. ವೈರಸ್ ಅಂತ್ಯವಾಯಿತು ಎಂದು ಎಲ್ಲಾ ಮುಂಜಾಗ್ರತಾ ಕ್ರಮ ಮತ್ತು ಮಾರ್ಗಸೂಚಿಗಳನ್ನು ಕೈಬಿಡುವುದು ಮೂರ್ಖತನ ಎಂದು ತಿಳಿಸಿದ್ದಾರೆ.

ವೈರಸ್ ವಿರುದ್ಧ ಹೋರಾಡುವ ವ್ಯವಸ್ಥೆ ಬಲಿಷ್ಠವಾಗಿದೆ. ಸಾಮಾನ್ಯ ಸಾಂಕ್ರಾಮಿಕ ಜ್ವರವಾಗಿದ್ದರೂ, ಸೋಂಕಾಗಿದ್ದರೂ ಮಾಸ್ಕ್ ಧರಿಸುವುದು ಒಳ್ಳೆಯದು. ಅದನ್ನು ಭವಿಷ್ಯದಲ್ಲೂ ಮುಂದುವರೆಸಬೇಕಿದೆ’ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಕಡ್ಡಾಯ ರದ್ದತಿ!