Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಸಿಕಾ ಅಭಿಯಾನ; 38.76 ಕೋಟಿ ಡೋಸ್ ನೀಡಿ ದಾಖಲೆ ಬರೆದ ಭಾರತ!

ಲಸಿಕಾ ಅಭಿಯಾನ; 38.76 ಕೋಟಿ ಡೋಸ್ ನೀಡಿ ದಾಖಲೆ ಬರೆದ ಭಾರತ!
ನವದೆಹಲಿ , ಬುಧವಾರ, 14 ಜುಲೈ 2021 (18:37 IST)
ನವದೆಹಲಿ(ಜು.14);  ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಲಸಿಕಾ ಅಭಿಯಾನ ಚುರುಕುಗೊಳಿಸಿದೆ. ರಾಜ್ಯಗಳಿಗೆ ಅಗತ್ಯ ಲಸಿಕೆ ಪೂರೈಕೆ ಮಾಡಿ, ಲಸಿಕಾ ಅಭಿಯಾನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಪರಿಣಾಮ ಭಾರತದ ಬೃಹತ್ ಕೋವಿಡ್ ಲಸಿಕಾ ಅಭಿಯಾನದಲ್ಲಿ ಇದುವರೆಗೆ 38.76 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಈ ಮೂಲಕ ಗರಿಷ್ಠ ಡೋಸ್ ನೀಡಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.


•             38.76 ಕೋಟಿ ಡೋಸ್ ದಾಟಿದ ರಾಷ್ಟ್ರೀಯ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ
•             ಕೋವಿಡ್-19 ಸೋಂಕಿನ ಚೇತರಿಕೆ ದರ 97.28%ಗೆ ಸುಧಾರಣೆ
•             ದೈನಂದಿನ ಪಾಸಿಟಿವಿಟಿ ದರ 2.10%ಗೆ ಇಳಿಕೆ

ವ್ಯಾಕ್ಸಿನ್ ಗಿs ಪಾಲಿಟಿಕ್ಸ್: ರಾಜ್ಯಗಳಿಗೆ ಆರೋಗ್ಯ ಸಚಿವರ ಖಡಕ್ ಕ್ಲಾಸ್!
ಇಂದು ಬೆಳಗಿನ ಆರೋಗ್ಯ ಇಲಾಖೆ  ವರದಿ ಪ್ರಕಾರ ಭಾರತದಲ್ಲಿ 38,76,97,935 ಡೋಸ್ ಲಸಿಕೆ ನೀಡಲಾಗಿದೆ.ಕಳೆದ 24 ತಾಸುಗಳಲ್ಲಿ 37,14,441 ಡೋಸ್ ಲಸಿಕೆ ಹಾಕಲಾಗಿದೆ.  ಜನವರಿ 16 ರಂದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇನ್ನೂ ಜೂನ್ 21 ರಿಂದ ಹೊಸ ಲಸಿಕಾ ನೀತಿ ಜಾರಿಯಾಗಿದೆ.  

 ಕೊರೊನಾ ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 3,01,04,720 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ 41,000 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶಾದ್ಯಂತ ಚೇತರಿಕೆ ದರ ಒಟ್ಟಾರೆ 97.28%ಗೆ ಸುಧಾರಣೆ ಕಂಡಿದೆ. 
12+ ಮೇಲ್ಪಟ್ಟಮಕ್ಕಳಿಗೆ ಈ ವಾರವೇ ಲಸಿಕೆಗೆ ಅಸ್ತು?
ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 38,792 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಸತತ 17 ದಿನಗಳಿಂದ ಪ್ರತಿದಿನ 50 ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾಗಲು ನಿರಂತರ ನಡೆಸುತ್ತಾ ಬಂದಿರುವ ಸುಸ್ಥಿರ ಮತ್ತು ಜಂಟಿ  ಪ್ರಯತ್ನಗಳೇ ಇದಕ್ಕೆ ಕಾರಣ.
ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 4,29,946ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.39% ಇದೆ.  ದೇಶಾದ್ಯಂತ ಗಂಟಲು ಮತ್ತು ಮೂಗು ದ್ರವ ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲಿ ಒಟ್ಟಾರೆ 19,15,501 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತದಲ್ಲಿ ಇದುವರೆಗೆ 43.59 ಕೋಟಿಗಿಂತ ಹೆಚ್ಚಿನ ಅಂದರೆ 43,59,73,639 ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದು ಕಡೆ ದೇಶಾದ್ಯಾಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ ಗಣನೀಯವಾಗಿ ಇಳಿಕೆ ಕಾಣುತ್ತಿರುವುದು ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಇದೀಗ 2.25%ಗೆ ತಗ್ಗಿದೆ. ದೈನಂದಿನ ಪಾಸಿಟಿವಿಟಿ ದರ ಪ್ರಸ್ತುತ 2.10%ಗೆ ಇಳಿಕೆ ಕಂಡಿದೆ. ಸತತ 23 ದಿನಗಳಿಂದ ಅದು 3% ಮಟ್ಟದಿಂದ ಕೆಳಗಿದೆ. ಅಲ್ಲದೆ, 37 ದಿನಗಳಿಂದ ಅದು 5% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷಾರ್ಥಿಗಳೇ... ಧೈರ್ಯವಾಗಿ ಪರೀಕ್ಷೆಗೆ ಬನ್ನಿ. ಆಲ್ ದ ಬೆಸ್ಟ್