Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾಂಸ ನಿಷೇಧ ಜನರ ಮೂಲಭೂತ ಹಕ್ಕಿನ ವಿಷಯ: ಹೈಕೋರ್ಟ್!

ಮಾಂಸ ನಿಷೇಧ ಜನರ ಮೂಲಭೂತ ಹಕ್ಕಿನ ವಿಷಯ: ಹೈಕೋರ್ಟ್!
ನೈನಿತಾಲ್ , ಭಾನುವಾರ, 25 ಜುಲೈ 2021 (16:58 IST)
ನೈನಿತಾಲ್(ಜು.25): ದೇಶದಲ್ಲಿ ಶೇ.70ರಷ್ಟುಜನಸಂಖ್ಯೆ ಮಾಂಸಾಹಾರ ಸೇವನೆ ಮಾಡುವುದರಿಂದ, ಮಾಂಸ ಮಾರಾಟ ನಿಷೇಧವು ಜನರ ಮೂಲಭೂತ ಹಕ್ಕುಗಳ ಕುರಿತಾದ ಕಳವಳಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಉತ್ತರಾಖಂಡ ಹೈಕೋಟ್ ಅಭಿಪ್ರಾಯಪಟ್ಟಿದೆ.

* ಹರಿದ್ವಾರದಲ್ಲಿ ಖಸಾಯಿಖಾನೆಗಳನ್ನು ನಿಷೆಧಿಸಬೇಕು ಎಂದು ಸಲ್ಲಿಸಲಾದ ಎರಡು ಅರ್ಜಿಗಳ ವಿಚಾರಣೆ
* ದೇಶದಲ್ಲಿ ಶೇ.70ರಷ್ಟು ಜನಸಂಖ್ಯೆ ಮಾಂಸಾಹಾರ ಸೇವನೆ
 * ಮಾಂಸ ಮಾರಾಟ ನಿಷೇಧವು ಜನರ ಮೂಲಭೂತ ಹಕ್ಕುಗಳ ಕುರಿತಾದ ಕಳವಳಕ್ಕೆ ಸಂಬಂಧಿಸಿದ ವಿಷಯ
ಹರಿದ್ವಾರದಲ್ಲಿ ಖಸಾಯಿಖಾನೆಗಳನ್ನು ನಿಷೆಧಿಸಬೇಕು ಎಂದು ಸಲ್ಲಿಸಲಾದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್, ‘ಮಾಂಸ ಮಾರಾಟ ನಿಷೇಧ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರಿಗೆ ಸಂಬಂಧಿತ ವಿಷಯ ಅಲ್ಲ. ಇಲ್ಲಿ ವಿಷಯ ಬಹಳ ಸರಳ. ಭಾರತೀಯ ನಾಗರಿಕರ ಮೂಲಭೂತ ಹಕ್ಕಿಗೆ ಸಂಬಂಧಿಸಿದ್ದಾಗಿದೆ’ ಎಂದು ತಿಳಿಸಿದೆ.
ಇದೇ ವೇಳೆ ಭಾರತೀಯರ ಆಹಾರ ಪದ್ಧತಿಗೆ ಸಂಬಂಧಿಸಿದಂತೆ 2018 ಮತ್ತು 2019ರಲ್ಲಿ ಪ್ರಕಟವಾದ ಸಮೀಕ್ಷೆಗಳನ್ನು ಉಲ್ಲೇಖಿಸಿದ ಹೈಕೋರ್ಟ್, ದತ್ತಾಂಶಗಳ ಪ್ರಕಾರ ಉತ್ತರಾಖಂಡದಲ್ಲಿ ಒಟ್ಟು ಜನಸಂಖ್ಯೆಯ ಪೈಕಿ ಶೇ.72ರಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ. ಭಾರತದಲ್ಲಿ ಶೇ.70ರಷ್ಟುಮಂದಿ ಮಾಂಸ ಸೇವನೆ ಮಾಡುತ್ತಾರೆ ಎಂದು ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮ ಪ್ರಕರಣ: ಯುವಕನಿಗೆ ಥಳಿಸಿ, ಗುಪ್ತಾಂಗ ಕತ್ತರಿಸಿದ್ರು: ಪ್ರೇಯಸಿ ಮನೆ ಎದುರೇ ಚಿತೆ!