ತಿರುವನಂತಪುರಂ : ಕರ್ನಾಟಕದಲ್ಲಿ ಹಾಲಿನ ದರ ಹೆಚ್ಚಳಗೊಂಡ ಬೆನ್ನಲ್ಲೇ ಕೇರಳದ ಹಾಲು ಒಕ್ಕೂಟ ಮಿಲ್ಮಾ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದೆ.
ಮಿಲ್ಮಾ ಹಾಲಿನ ದರವನ್ನು ಡಿ.1 ರಿಂದ ಲೀಟರ್ಗೆ 6 ರೂ. ಏರಿಕೆಗೆ ನಿರ್ಧರಿಸಿದೆ. ಈ ಹಿಂದೆ 2019ರಲ್ಲಿ ಲೀ.4 ರೂ. ಏರಿಸಲಾಗಿತ್ತು. ಇದೀಗ 3 ವರ್ಷಗಳ ನಂತರ ಲೀ.6 ರೂ. ಏರಿಕೆ ಮಾಡಲು ಮಿಲ್ಮಾ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಿಲ್ಮಾ ಫೆಡರೇಶನ್ ಅಧ್ಯಕ್ಷ ಕೆ.ಎಸ್. ಮಣಿ, ಈ ಹಿಂದೆ ಹಾಲಿನ ದರ ಏರಿಕೆ ಮಾಡಿದಾಗ ರೈತರಿಗೆ 3.35 ರೂ. ಸಿಗುತ್ತಿತ್ತು. ಇದೀಗ 6 ರೂ. ಏರಿಕೆ ಮಾಡಿದಾಗ 5.25 ರೈತರಿಗೆ ಸಿಗಲಿದೆ. ಈ ಬಗ್ಗೆ ಮಿಲ್ಮಾ ಹಾಲು ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ .