Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ ! ಗ್ರಾಹಕರು ಕಂಗಾಲು

ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ ! ಗ್ರಾಹಕರು ಕಂಗಾಲು
ಗಾಂಧೀನಗರ , ಶನಿವಾರ, 2 ಏಪ್ರಿಲ್ 2022 (13:30 IST)
ಗಾಂಧೀನಗರ : ಗುಜರಾತ್ನ ರಾಜ್ಕೋಟ್ನಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ನಿಂಬೆಹಣ್ಣಿನ ಬೆಲೆ ಕೂಡ ಏರಿಕೆಯಾಗಿದೆ.

ಪ್ರತಿ ಕೆಜಿಗೆ 50-60ರೂ. ಇದ್ದ ನಿಂಬೆಹಣ್ಣು ಇದೀಗ 200 ರೂ.ಗೆ ಮಾರಾಟವಾಗುತ್ತಿದೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಗ್ರಾಹಕರೊಬ್ಬರು, ನಿಂಬೆ ಹಣ್ಣಿನ ಬೆಲೆ ಕೆಜಿಗೆ 200 ತಲುಪುತ್ತಿದೆ. ಮೊದಲು ನಿಂಬೆ ಹಣ್ಣಿನ ಬೆಲೆ ಕೆಜಿಗೆ 50-60 ರೂ. ಇತ್ತು.

ನಾವು ಎಲ್ಲವನ್ನೂ ಬಜೆಟ್ಗೆ ಹೊಂದಿಸಬೇಕು. ಆದರೆ ಈ ಬೆಲೆ ಏರಿಕೆ ನಮ್ಮ ಮೇಲೆ ಪರಿಣಾಮ ಬೀರುತ್ತಿದೆ. ಬೆಲೆಗಳು ಯಾವಾಗ ಕಡಿಮೆಯಾಗುತ್ತವೆ ಯಾವಾಗ ಹೆಚ್ಚಗುತ್ತದೆ ಎಂಬುವುದೇ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಜನರು ತಮ್ಮ ಆಹಾರದಲ್ಲಿ ನಿಂಬೆ ಹಣ್ಣನ ರಸವನ್ನು ಬಳಸಲು ಬಯಸುತ್ತಾರೆ.

ಏಕೆಂದರೆ ಅವುಗಳಲ್ಲಿ ವಿಟಮಿನ್ ಸಿ ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಹೀಗಾಗಿ ಜನ ನಿಂಬೆಹಣ್ಣನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದಲ್ಲಿ ಶಾಂಘೈ ಲಾಕ್‌ಡೌನ್ ಘೋಷಣೆ !