ದೆಹಲಿ(ಜು.27): ಭಾರತೀಯ ವೇಟ್ಲಿಫ್ಟರ್ ಮೀರಾಬಾಯಿ ಚಾನು ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
•ಟೋಕಿಯೋ ಬೆಳ್ಳಿ ಗೆದ್ದ ಮೀರಾಬಾಯಿಗೆ ಮಣಿಪುರ ಸರ್ಕಾರದ ಬಂಪರ್ ಗಿಫ್ಟ್
•ಮೀರಾಬಾಯಿ ಅವರನ್ನು ASPಯಾಗಿ ನೇಮಿಸಲಿದೆ ಮಣಿಪುರ ಸರ್ಕಾರ
ಚಾನು ಭಾರತಕ್ಕೆ ಮರಳಿದ್ದು ವಿಮಾನ ನಿಲ್ದಾಣದಲ್ಲಿ ಸಂಭ್ರಮದ ಸ್ವಾಗತ ಪಡೆದಿದ್ದಾರೆ. ಅಲ್ಲಿ ಅಭಿಮಾನಿಗಳು ಮತ್ತು ಮಾಧ್ಯಮ ಸಿಬ್ಬಂದಿ ಚಾನು ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪೊಲೀಸ್ ಇಲಾಖೆಯಲ್ಲಿ ಚಾನು ಅವರನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ (ಕ್ರೀಡಾ) ನೇಮಿಸಲು ಮಣಿಪುರ ಸರ್ಕಾರ ನಿರ್ಧರಿಸಿದೆ.
ಪೊಲೀಸ್ ಇಲಾಖೆಯಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸೈಖೋಮ್ ಮಿರಾಬಾಯ್ ಚಾನು ಅವರನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ (ಕ್ರೀಡಾ) ನೇಮಕ ಮಾಡಲು ಮಣಿಪುರ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಇಂಫಾಲ್ ಹೇಳಿರುವುದಾಗಿ ಎಎನ್ಐ ಟ್ವೀಟ್ ನಲ್ಲಿ ತಿಳಿಸಿದೆ.
ಟೋಕಿಯೊದಲ್ಲಿ ತನ್ನ ಐತಿಹಾಸಿಕ ಪ್ರದರ್ಶನಕ್ಕಾಗಿ ಚಾನು ಅವರಿಗೆ ಮಣಿಪುರದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರಿಗೆ 1 ಕೋಟಿ ರೂ. ನೀಡುವ ನಿರ್ಧಾರವನ್ನು ಈ ಹಿಂದೆ ಪ್ರಕಟಿಸಿದ್ದರು.
ರಾಜ್ಯ ಸರ್ಕಾರ ನಿಮಗೆ 1 ಕೋಟಿ ರೂ. ಘೋಷಿಸುತ್ತಿದೆ. ನಿಮಗೆ ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣ. ನಾನು ನಿಮಗಾಗಿ ವಿಶೇಷ ಪೋಸ್ಟ್ ಅನ್ನು ಕಾಯ್ದಿರಿಸುತ್ತಿದ್ದೇನೆ. ನಾನು ಗೌರವಾನ್ವಿತ ಗೃಹ ಸಚಿವರನ್ನು ಸಂಜೆ ಭೇಟಿಯಾಗುತ್ತಿದ್ದೇನೆ. ನಾನು ಈಗ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ. ಅದು ನಿಮಗೆ ಆಶ್ಚರ್ಯವನ್ನುಂಟುಮಾಡಲಿದೆ ಎಂದು ವಿಡಿಯೋ ಕರೆಯೊಂದರಲ್ಲಿ ಸಿಂಗ್ ಚಾನುಗೆ ತಿಳಿಸಿದ್ದಾರೆ.
ವೆಯ್ಟ್ ಲಿಫ್ಟಿಂಗ್ ಸುಲಭ ಎಂದು ಆಯ್ಕೆ ಮಾಡಿಕೊಂಡೆ; ಸುವರ್ಣನ್ಯೂಸ್ ಜೊತೆ ಪದಕ ಗೆದ್ದ ಮೀರಾ ಮಾತು!
ನಾನು ತುಂಬಾ ಸಂತೋಷಳಾಗಿದ್ದೇನೆ. ಮಣಿಪುರದ ಎಲ್ಲರೂ ನನಗಾಗಿ ಪ್ರಾರ್ಥಿಸಿದರು. ನಾನು ಬೆಳ್ಳಿ ಪದಕ ಗೆದ್ದಿದ್ದೇನೆ. ಮಣಿಪುರದ ಪ್ರತಿಯೊಬ್ಬರ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಅವರ ಬೆಂಬಲದಿಂದಾಗಿ ನಾನು ಇಂದು ಇಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.