ಬೆಂಗಳೂರು : ಅಬಕಾರಿ ಇಲಾಖೆ ಮದ್ಯ ಮಾರಾಟದಿಂದ ಭರ್ಜರಿ ಆದಾಯಗಳಿಸಿದೆ. ಕಳೆದ 5 ವರ್ಷಗಳಲ್ಲಿ ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಹಣದ ಹೊಳೆ ಹರಿದು ಬಂದಿದೆ.
ಮದ್ಯ ಮಾರಾಟದ ಬಗ್ಗೆ ಸರ್ಕಾರ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಕಳೆದ 5 ವರ್ಷಗಳಲ್ಲಿ ಸುಮಾರು 1 ಲಕ್ಷ ಕೋಟಿ ಆದಾಯ ಸಂಗ್ರಹ ಮಾಡಿದೆ.
ಜೆಡಿಎಸ್ ಸದಸ್ಯ ಗೋವಿಂದ್ ರಾಜ್ ಪ್ರಶ್ನೆಗೆ ಸಚಿವ ಕೆ. ಗೋಪಾಲಯ್ಯ ಉತ್ತರ ನೀಡಿದ್ದಾರೆ. ಜನವರಿ ಅಂತ್ಯದ ವೇಳೆಗೆ 2017-2023ರ ನಡುವಿನ ಮದ್ಯ ಮಾರಾಟದ ಅಂಕಿ ಅಂಶ ಪ್ರಕಟ ಮಾಡಿದೆ.