ರಾಯಪುರ : ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ- 1956ರ ನಿಬಂಧನೆಗಳ ಅಡಿಯಲ್ಲಿ ಅವಿವಾಹಿತ ಹೆಣ್ಣುಮಗಳು ಪೋಷಕರಿಂದ ವಿವಾಹದ ವೆಚ್ಚ ಪಡೆಯಬಹುದು ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದೆ.
35 ವರ್ಷದ ರಾಜೇಶ್ವರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಿಲಾಸ್ಪುರದ ಹೈಕೋರ್ಟ್ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.
ಈ ವೇಳೆ ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು 2016ರ ಏಪ್ರಿಲ್ 22ರಂದು ನೀಡಿದ ಆದೇಶವನ್ನು ವಜಾಗೊಳಿಸಿದೆ.
ಮಾರ್ಚ್ 21ರಂದು ವಿಚಾರಣೆಗೆ ಅಂಗೀಕರಿಸಿದ್ದ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಹಾಗೂ ಸಂಜಯ್ ಎಸ್.ಅಗರವಾಲ್ ಅವರ ವಿಭಾಗೀಯ ಪೀಠವು,
ಕಾನೂನಿನ ಪ್ರಕಾರ ಅವಿವಾಹಿತ ಮಗಳು ತನ್ನ ತಂದೆಯಿಂದ ಮದುವೆಯ ವೆಚ್ಚವನ್ನು ಪಡೆಯಬಹುದು ಎಂದು ತೀರ್ಪು ಪ್ರಕಟಿಸಿತು.