ನವದೆಹಲಿ : ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ (ಡಿಹೆಚ್ಆರ್) ವಿಶ್ವಪ್ರಸಿದ್ಧ ಟಾಯ್ ರೈಲ್ವೇ ಸೇವೆಯ ದರವನ್ನು ಕಡಿಮೆ ಮಾಡಲಾಗಿದೆ. ಆ ಮೂಲಕ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಲಾಗಿದೆ.
ಡಿಹೆಚ್ಆರ್ ಅಧಿಕಾರಿಗಳು ಕ್ವೀನ್ ಆಫ್ ಹಿಲ್ಸ್ ಡಾರ್ಜಿಲಿಂಗ್ನ ರೈಲು ಸೇವೆಯ ದರವನ್ನು 200 ರೂ. ವರೆಗೆ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಅಧಿಕಾರಿಗಳು ಈ ಉಪಕ್ರಮವನ್ನು ತೆಗೆದುಕೊಂಡಿದ್ದಾರೆ.
ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿದೆ. ದರ ಇಳಿಕೆಯ ಬಗ್ಗೆ ಈಶಾನ್ಯ ಗಡಿ ರೈಲ್ವೆಯ ಕತಿಹಾರ್ ವಿಭಾಗದ ಎಡಿಆರ್ಎಂ ಸಂಜಯ್ ಚಿಲ್ವರ್ವಾರ್ ಮಾತನಾಡಿ, ಟಾಯ್ ರೈಲಿನ ಎಲ್ಲಾ ದರಗಳನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ.
ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್ಗೆ ಹೋಗುವ ರೈಲಿನಲ್ಲಿ ಚೇರ್ ಕಾರ್ ದರ ಈ ಹಿಂದೆ 1,600 ರೂ. ಗಳಷ್ಟಿತ್ತು. ಆದರೆ ಈಗ ಅದನ್ನು 1,400 ರೂ. ಗೆ ಇಳಿಸಲಾಗಿದೆ.