ಬೆಂಗಳೂರು: ದೀಪಾವಳಿಗೆ ಈ ಬಾರಿ ಹಗಲು ಹೊತ್ತಿನಲ್ಲೂ ವಾಯು ಮಾಲಿನ್ಯ ಉಂಟುಮಾಡುವ ಪಟಾಕಿ ಹೊಡೆಯಬಾರದು ಎಂದು ಸುಪ್ರೀಂಕೋರ್ಟ್ ಮೊನ್ನೆಯಷ್ಟೇ ಆದೇಶ ಹೊರಡಿಸಿತ್ತು.
ಆದರೆ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕಂಡುಬರುತ್ತಿಲ್ಲ. ಹಗಲು, ರಾತ್ರಿ ಎನ್ನದೇ ದೀಪಾವಳಿಗೆ ಮೊದಲೇ ಪಟಾಕಿ ಹೊಡೆಯುವವರ ಕಾರುಬಾರು ಎಗ್ಗಿಲ್ಲದೆಯೇ ಮುಂದುವರಿದಿದೆ. ಅತ್ತ ಸುಡುಮದ್ದು ತಯಾರಕರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅದೇನೇ ಇದ್ದರೂ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಜನರೇ ಎಚ್ಚೆತ್ತುಕೊಂಡು ಜವಾಬ್ಧಾರಿಯುತವಾಗಿ ನಡೆದುಕೊಂಡರೆ ನಮಗೇ ಒಳಿತು. ಪಟಾಕಿ ನೆಪದಲ್ಲಿ ಪರಿಸರ ಹಾಳು ಮಾಡುವುದು ಮತ್ತು ಸಾರ್ವಜನಿಕರಿಗೆ ಕಿರಿ ಕಿರಿ ಮಾಡದೇ ನಮ್ಮ ಜವಾಬ್ಧಾರಿ ಅರಿತು ನಡೆದುಕೊಳ್ಳೋಣ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.