Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶೃಂಗೇರಿ ಇಲ್ಲಾಂದ್ರೆ ತೆರೇದಾಳನಿಂದ ಚುನಾವಣೆಗೆ ಸ್ಪರ್ಧೆ: ಪ್ರಮೋದ್ ಮುತಾಲಿಕ್

ಶೃಂಗೇರಿ ಇಲ್ಲಾಂದ್ರೆ ತೆರೇದಾಳನಿಂದ ಚುನಾವಣೆಗೆ ಸ್ಪರ್ಧೆ: ಪ್ರಮೋದ್ ಮುತಾಲಿಕ್
ಚಿಕ್ಕಮಗಳೂರ , ಮಂಗಳವಾರ, 3 ಏಪ್ರಿಲ್ 2018 (18:07 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ಇಲ್ಲಾಂದ್ರೆ ತೆರೇದಾಳನಿಂದ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶ್ರೀರಾಮ ಸೇನೆ ಶಿವಸೇನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಈ ಭಾರಿ ಚುನಾವಣೆಯಲ್ಲಿ ಶಿವಸೇನೆ ನೇತೃತ್ವದಲ್ಲಿ 6೦ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದೇವೆ. ಸಿದ್ದಲಿಂಗ ಸ್ವಾಮೀಜಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ನಾನು ಶೃಂಗೇರಿ ಅಥವಾ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆಈ ಬಗ್ಗೆ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
 
ಹಿಂದೂತ್ವ ನಮ್ಮ ಪ್ರಮುಖ ಅಜಂಡಾ ಬಿಜೆಪಿ ಯದ್ದು ಡೋಂಗಿ ಹಿಂದೂತ್ವ. ಬಿಜೆಪಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹಿಂದೂತ್ವವನ್ನು ಬಳಸಿಕೊಳ್ಳುತ್ತಿದೆ
 
ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ. ಕೇಂದ್ರದ ಬಿಜೆಪಿ ಸರ್ಕಾರ ಇದ್ರು. ಭಾರತ ಗೋ ಮಾಂಸ ಸಾಗಾಟದಲ್ಲಿ ನಂಬರ್ 1 ಆಗಿದೆ ಅನಂತ್ ಕುಮಾರ್ ಗೋ ಮಾಂಸ ನಿಷೇಧದ ಬಗ್ಗೆ ಡೋಂಗಿ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.
 
ಗೋ ಮಾಂಸ ನಿಷೇಧ ಎನ್ನುವುದು ಬಿಜೆಪಿಯ ಬೂಟಾಟಿಕೆ. ದತ್ತಪೀಠವೂ ಗೋ ಮಾಂಸ ನಿಷೇಧದ ಹಾಗೆ ದತ್ತಪೀಠವನ್ನು ಸಹ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಸಿ ಟಿ ರವಿ ಇದೇ ದತ್ತಪೀಠ ವಿವಾದದಿಂದ ಮೂರು ಬಾರಿ ಶಾಸಕರಾಗಿದ್ದಾರೆ. ದತ್ತಪೀಠ ಗುಹೆ ಕಟ್ಟಲಾಗದ ಸಿ ಟಿ ರವಿ 8 ಕೋಟಿ ಖರ್ಚು ಮಾಡಿ ತಮ್ಮ ಮನೆ ಕಟ್ಟಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
 
ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರ್ಪಡೆಗೆ ಮುತಾಲಿಕ್ ಕಿಡಿ ನೂರಾರು ಮಸೀದಿಯನ್ನು ಕಟ್ಟಿದವನನ್ನು ಬಿಜೆಪಿಗೆ ಕರೆತಂದದ್ದು ಯಾಕೆ ಮಾಲೀಕಯ್ಯ ಗುತ್ತೇದಾರ್ ರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಯಾರಿಗೆ ಪಾಠ ಹೇಳಲು ಹೊರಟಿದ್ದೀರಿ ಎಂದು  ಪ್ರಮೋದ್ ಮುತಾಲಿಕ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈರಿಂದ ಶಿವಮೊಗ್ಗದ ಜಿಲ್ಲೆಗೆ ಅಪಖ್ಯಾತಿ: ಸಿಎಂ