ನವದೆಹಲಿ : ಇನ್ಮುಂದೆ ಎಕನಾಮಿಕ್ ಕ್ಲಾಸ್ 3, ಎಸಿ ಕೋಚ್ಗಳಲ್ಲಿ ಸಂಚರಿಸುವವರಿಗೆ ಮಲಗುವ ಹಾಸಿಗೆ ವ್ಯವಸ್ಥೆಯ ಸೌಲಭ್ಯವೂ ಇರಲಿದ್ದು, ಇದೇ ಸೆಪ್ಟೆಂಬರ್ 20 ರಿಂದ ಸೌಲಭ್ಯಗಳು ಜಾರಿಗೆ ಬರಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ರೈಲ್ವೆ ಇಲಾಖೆಯು ಅನೇಕ ಕಡೆ 3ನೇ ದರ್ಜೆಯ ಎಸಿ ಕೋಚ್ಗಳನ್ನು ಹೆಚ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದೆ. ಆದರೂ ಎಂದಿನಂತೆ ಸಾಮಾನ್ಯ ದರವೇ ಇರಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಪ್ರತಿ ಕಂಪಾರ್ಟ್ಮೆಂಟ್ನಲ್ಲೂ ಲೆನಿನ್ ಹಾಸಿಗೆ ಇರಿಸಲಾಗುತ್ತದೆ. ಆದರೆ ಬರ್ತ್ ಸಂಖ್ಯೆ 81, 82 ಮತ್ತು 83 ಬುಕ್ಕಿಂಗ್ ಆಗಿದ್ದಂತಹ ಸಂದರ್ಭದಲ್ಲಿ ಈ ಸೌಲಭ್ಯ ಇರುವುದಿಲ್ಲ. ಹೊರತಾಗಿ ಉಳಿದೆಲ್ಲ ಸಮಯಗಳಲ್ಲೂ ಹಾಸಿಗೆ ಸೌಲಭ್ಯ ಇರಲಿದೆ. ಸೆಪ್ಟೆಂಬರ್ 20ರಿಂದಲೇ ಈ ಸೌಲಭ್ಯ ಜಾರಿಗೆ ಬರಲಿದೆ.
ಸೆಪ್ಟೆಂಬರ್ 20ರ ನಂತರ ತಮ್ಮ ರೈಲುಗಳನ್ನು ಕಾಯ್ದಿರಿಸಿದ ಪ್ರಯಾಣಿಕರಿಗೆ ಪ್ರಯಾಣದ ದಿನಾಂಕವನ್ನು ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ. ಅಲ್ಲದೇ ಅವರ ಬರ್ತ್ ಸಂಖ್ಯೆಗಳು 81, 82, 83 ಆಗಿದ್ದಲ್ಲಿ, ಅಂತಹ ಪ್ರಯಾಣಿಕರಿಗೆ ತುರ್ತು ಕೋಟಾದ ಅಡಿಯಲ್ಲಿ ಇತರ ಕೋಚ್ಗಳಲ್ಲಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಹಾಸಿಗೆ ಸೌಲಭ್ಯಗಳನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಭಾರತೀಯ ರೈಲ್ವೆ ಇಲಾಖೆ ಪುನರಾರಂಭಿಸುತ್ತಿದೆ.