ಪಾಕಿಸ್ತಾನದ ಗುಡ್ಡಗಾಡು ಪ್ರವಾಸಿ ಸ್ಥಳ ಮುರ್ರೆಯಲ್ಲಿ ವಿಪರೀತ ಹಿಮಪಾತವಾಗಿ ಪ್ರವಾಸಿಗರ ವಾಹನಗಳೆಲ್ಲ ಹಿಮದಡಿ ಸಿಲುಕಿದ ಪರಿಣಾಮ ಸುಮಾರು 16 ಜನರು ಅವರ ವಾಹನದೊಳಗೆ ಇದ್ದಂತೆಯೇ ಮೃತಪಟ್ಟಿದ್ದಾರೆ.
ಸದ್ಯ ಅಲ್ಲಿ ಹಿಮದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲು ಪಾಕಿಸ್ತಾನ ಸರ್ಕಾರ ಸೇನಾ ಸಿಬ್ಬಂದಿ ಮತ್ತು ಇತರ ನಾಗರಿಕ ರಕ್ಷಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಿದೆ.
ಹಿಮಪಾತದಿಂದ ಮುರ್ರೆಗೆ ಹೋಗುವ ಎಲ್ಲ ರಸ್ತೆಗಳೂ ಬ್ಲಾಕ್ ಆಗಿದ್ದು, ನಗರದಲ್ಲೀಗ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಸಿಲುಕಿದ್ದಾರೆ. ಅವರಿಗೆ ಯಾವುದೇ ಮಾರ್ಗದ ಮೂಲಕವೂ ಮುರ್ರೆಯಿಂದ ಹೊರಬೀಳಲು ಸಾಧ್ಯವಾಗುತ್ತಿಲ್ಲ. ಸದ್ಯ ಮುರ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.