ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರ್ ಎಸ್ ಎಸ್ ಮುಖಂಡರೊಬ್ಬರು ನಾಮಪತ್ರ ಸಲ್ಲಿಸಿದ್ದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.
ನಾನು ಸ್ಪರ್ಧಿಸುವುದಾದರೆ ಕಾಗೋಡು ತಿಮ್ಮಪ್ಪನವರೆ ನನ್ನ ಎದುರಾಳಿಯಾಗಿರಬೇಕು ಎಂದು ಹೇಳಿದ್ದ ಬೇಳೂರು ಗೋಪಾಲಕೃಷ್ಣ ಅವರೆ ಈಗ ಕಾಗೋಡು ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಇನ್ನು ಕೆ.ಎಸ್.ಈಶ್ವರಪ್ಪನವರ ಸೋಲು ಖಚಿತ ಎಂದು ಹೇಳಿರುವ ಪ್ರಸನ್ನ ಕುಮಾರ್ ಕೂಡ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ಇದೆಲ್ಲದರ ನಡುವೆ ಬಗಲ್ ಮೆ ದುಶ್ಮನ್ ಎನ್ನುವಂತೆ
ಮೊನ್ನೆ ಮೊನ್ನೆವರೆಗೂ ವೈರಿಗಳಾಗಿ ಕಾದಾಡಿಕೊಂಡಿದ್ದ ಮಾವ ಅಳಿಯ. ಒಟ್ಟಿಗೆ ಬಂದು ಮಾವನ ಸ್ಪರ್ಧೆಗೆ ಅಳಿಯ ಸಾಥ್ ಕೊಟ್ಟಿದ್ದಾರೆ. ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಾಥ್ ನೀಡಿದ್ದು ಮಾಜಿ ಶಾಸಕ ಕಾಗೋಡು ಅಳಿಯ ಬೇಳೂರು ಗೋಪಾಲಕೃಷ್ಣ. ಈ ಹಿಂದಿನ ಚುನಾವಣೆಯಲ್ಲಿ ಈ ಮಾವ ಅಳಿಯ ಮೂರು ಬಾರಿ ಚುನಾವಣೆ ಎದುರಿಸಿದ್ದು ಎರಡು ಬಾರಿ ಅಳಿಯ ಒಂದು ಬಾರಿ ಮಾತ್ರ ಮಾವ ನಗುವಿನ ನಗೆ ಬೀರಿದ್ದರು. ಬದಲಾದ ಸನ್ನಿವೇಷದಲ್ಲಿ ಬಿಜೆಪಿಗೆ ಸಡ್ಡು ಹೊಡೆದ ಬೇಳೂರು ಮಾವ ಕಾಗೋಡಿಗೆ ಸಾಥ್ ನೀಡಿ ಬಿಜೆಪಿ ಸೋಲಿಸೋದೆ ನನ್ನ ಗುರಿ ಎಂದಿದ್ದಾರೆ. ಕಾಗೋಡು ಕೂಡ ಬೇಳೂರು ಕಾಂಗ್ರೆಸ್ ಗೆ ಬಂದಿದ್ದು ನಮ್ಮ ಬಲ ಹೆಚ್ಚಿದೆ. ಅವರಿಗೆ ಮುಂದಿನ ದಿನದಲ್ಲಿ ಸೂಕ್ತ ಸ್ಥಾನಮಾನ ದೊರಕಲಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್ ಎಸ್ಎಸ್ ಸಡ್ಡು ಹೊಡೆದ ಘಟನೆಯೂ ನಡೆದಿದೆ. ಸ್ವಯಂ ಸೇವಕ ಹನುಮೇಗೌಡ ಗಣವೇಷಧಾರಿಯಾಗಿಯೇ ಬಂದು ನಾಮಪತ್ರ ಸಲ್ಲಿಸುವ ಮೂಲಕ ಗಮನಸೆಳೆದಿದ್ದಾರೆ.