Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಾಲೆಗಳಲ್ಲಿ ಇನ್ನೂ ಹೆಚ್ಚಾಗಬೇಕು ಸ್ವಾತಂತ್ರ್ಯದ ಕಾಳಜಿ

ಶಾಲೆಗಳಲ್ಲಿ ಇನ್ನೂ ಹೆಚ್ಚಾಗಬೇಕು ಸ್ವಾತಂತ್ರ್ಯದ ಕಾಳಜಿ

Krishnaveni K

ಬೆಂಗಳೂರು , ಮಂಗಳವಾರ, 14 ಆಗಸ್ಟ್ 2018 (12:00 IST)
ಬೆಂಗಳೂರು: ನಾವು ಚಿಕ್ಕವರಿದ್ದಾಗ ಹೋಗುತ್ತಿದ್ದ ಹಳ್ಳಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯೆಂದರೆ ಒಂದು ದೊಡ್ಡ ಹಬ್ಬವೇ ಸರಿ. ಆದರೆ ಇಂದಿನ ನಗರದ ಶಾಲೆಗಳಲ್ಲಿ ಇದು ಕಡಿಮೆಯಾಗುತ್ತದೆ.

ಬೆಂಗಳೂರಿನಂತಹ ನಗರಗಳಲ್ಲಿ ನಾಯಿ ಕೊಡೆಯಂತೆ ಬೀದಿಗೊಂದು ಶಾಲೆಗಳಿವೆ. ಆದರೆ ಸ್ವಾತಂತ್ರ್ಯ ದಿನವನ್ನು ಆಚರಿಸುವುದು ಕೆಲವು ಶಾಲೆಗಳಲ್ಲಿ ಮಾತ್ರ. ಮಿಕ್ಕಂತೇ ಈ ದಿನ ರಜಾ ಮಜಾ ದಿನ ಎಂದೇ ಮಕ್ಕಳು ಅಂದುಕೊಂಡುಬಿಟ್ಟಿದ್ದಾರೆ.

ಸ್ಥಳದ ಕೊರತೆಯೋ, ಶಿಕ್ಷಕರ, ಆಡಳಿತ ಮಂಡಳಿಯ ಉದಾಸೀನವೋ. ಕೆಲವು ಶಾಲೆಗಳಲ್ಲಿ ಧ್ವಜಾರೋಹಣ ಮಾಡುವ ಔದಾರ್ಯವೂ ತೋರುವುದಿಲ್ಲ. ಇದರಿಂದಾಗಿ ನಷ್ಟವಾಗುತ್ತಿರುವುದು ವಿದ್ಯಾರ್ಥಿಗಳಿಗೆ.

ಸ್ವಾತಂತ್ರ್ಯ ದಿನ ಎನ್ನುವುದು ಕೇವಲ ಆಚರಣೆಯಲ್ಲ. ಇದು ನಮ್ಮ ದೇಶದ ಬಗ್ಗೆ, ಇಲ್ಲಿನ ಸಂಸ್ಕೃತಿ, ಆಚರಣೆಯ ಬಗ್ಗೆ, ದೇಶಭಕ್ತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಿಗುವ ಸಂದರ್ಭ. ವಿಪರ್ಯಾಸವೆಂದರೆ ಬೆಂಗಳೂರಿನ ಕೆಲವು ವಿದ್ಯಾರ್ಥಿಗಳಿಗೆ ಧ್ವಜಾರೋಹಣ ಎಂದರೇ ಏನೆಂದು ತಿಳಿದಿರುವುದಿಲ್ಲ. ಇನ್ನು ದೇಶಭಕ್ತಿಯ ಮಾತೆಲ್ಲಿ?

ಹೀಗಾಗಿಬಿಟ್ಟರೆ ನಾವು ಮಕ್ಕಳಿಗೆ ಏನೆಂದು ಸಂದೇಶ ನೀಡಿದಂತಾಗುತ್ತದೆ.  ಶಾಲೆಯ ಆಡಳಿತ ಮಂಡಳಿಗಳು ಈ ನಿಟ್ಟಿನಲ್ಲಿ ಗಮನಹರಿಸಲೇಬೇಕು. ಎಷ್ಟೇ ಪುಟ್ಟದಾಗಿದ್ದರೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನ ಕಡ್ಡಾಯವಾಗಿ ಎಲ್ಲರೂ ಹಾಜರಿದ್ದು, ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮವನ್ನಾದರೂ ಇಟ್ಟುಕೊಳ್ಳಲೇಬೇಕು ಎಂಬ ನಿಯಮ ಕಡ್ಡಾಯ ಮಾಡಿದರೆ ಮಾತ್ರ ಇದು ಸಾಧ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ