ನವದೆಹಲಿ: ಜರ್ಮನಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಕಟುವಾಗಿ ಟೀಕೆ ಮಾಡಿದ್ದಾರೆ.
ಮೊನ್ನೆಯಷ್ಟೇ ನಿರುದ್ಯೋಗದಿಂದಾಗಿ ಐಸಿಸ್ ನಂತಹ ಸಂಘಟನೆ ಹುಟ್ಟಿಕೊಳ್ಳುತ್ತಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ರಾಹುಲ್ ಇದೀಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಮಾಡಲು ಬೇರೆ ಕೆಲಸವಿಲ್ಲ. ಅದಕ್ಕೇ ವೀಸಾ ವಿತರಿಸುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
‘ನೀವು ಗಮನಿಸಿರಬಹುದು. ಕೆಲವರು ಹೇಳುತ್ತಾರೆ, ವಿದೇಶಾಂಗ ಸಚಿವೆ ವೀಸಾ ವಿತರಣೆ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅಂದರೆ ಅದರ ಅರ್ಥ ಅವರಿಗೆ ಅದರ ಹೊರತು ಬೇರೆ ಕೆಲಸವಿಲ್ಲ. ವಿದೇಶಾಂಗ ಇಲಾಖೆಯನ್ನು ಪ್ರಧಾನಿ ಕಾರ್ಯಾಲಯವೇ ನಿಯಂತ್ರಿಸುತ್ತಿದೆ ಎಂದಲ್ಲವೇ?’ ಎಂದು ರಾಹುಲ್ ಕಟು ಟೀಕೆ ಮಾಡಿದ್ದಾರೆ. ಜರ್ಮನಿ ಪ್ರವಾಸದಲ್ಲಿರುವ ರಾಹುಲ್ ಹೇಳಿಕೆಗಳು ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಅದರ ಬೆನ್ನಲ್ಲೇ ಮತ್ತೊಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.