ಬೆಳಗಾವಿ :ದೀಪಾವಳಿ ಹಬ್ಬಕ್ಕೆ ಮೊದಲೇ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳೋದು ಸತ್ಯ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಭವಿಷ್ಯ ನುಡಿದಿದ್ದಾರೆ.
ದೋಸ್ತಿ ಸರ್ಕಾರದ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವು ಸರ್ಕಾರ ಮಾಡೋದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಹೇಳುವ ಮೂಲಕ ಆಪರೇಷನ್ ಕಮಲ ಮುಂದುವರಿದೇ ಎಂದು ಅವರು ಹೇಳಿದ್ದಾರೆ.
ಇದಲ್ಲದೇ ಬಿಜೆಪಿಯಿಂದ 30 ಕೋಟಿ ಆಫರ್ ಬಂದಿತ್ತು ಅಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಂಥವರನ್ನ ಬಹಳ ಮಂದಿಯನ್ನ ನೋಡಿದ್ದೇನೆ ಎಂದಿದ್ದಾರೆ. ದೀಪಾವಳಿಗೆ ಮೊದಲೇ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳೋದು ಗ್ಯಾರೆಂಟಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.