ಬೆಂಗಳೂರು : ಇಂದು ಸದನ ಆರಂಭವಾಗುತ್ತಿದ್ದಂತೆ ಚಾಣಕ್ಯ ವಿವಿ ಮಸೂದೆ ಕುರಿತಂತೆ ಚರ್ಚೆ ಆರಂಭಗೊಂಡಿತ್ತು. ಇಂತಹ ಮಸೂದೆಗೆ ವಿರೋಧ ವ್ಯಕ್ತ ಪಡಿಸಿದಂತ ಕಾಂಗ್ರೆಸ್, ಸದನದಲ್ಲಿ ಗದ್ದಲ ಉಂಟು ಮಾಡಿತು.
ಅಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೂ ವಿರೋಧ ವ್ಯಕ್ತ ಪಡಿಸಿತು. ಇದರಿಂದ ಆಡಳಿತ ಹಾಗೂ ವಿಪಕ್ಷಗಳ ಶಾಸಕರ ನಡುವೆ ಮಾತನಿ ಚಕಮಕಿ ಉಂಟಾದ ಕಾರಣ, ಸದನವನ್ನು ಸ್ಪೀಕರ್ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.
ಸದನದಲ್ಲಿ ಇಂದು ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಚಾಣಕ್ಯ ವಿವಿ ಮಸೂದೆಗಳ ಮೇಲೆ ಚರ್ಚೆ ಆರಂಭಗೊಂಡಿತ್ತು. ಈ ವೇಳೆ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾಯಿತು. ಬಿಜೆಪಿ ತರೋದಕ್ಕೆ ಹೊರಟಿರುವಂತ ಎನ್ ಇ ಪಿ, ನಾಗ್ಪುರ ಎಜುಕೇಷನ್ ಪಾಲಿಸಿ ಎಂಬುದಾಗಿ ಸದನದಲ್ಲಿ ಡಿಕೆ ಶಿವಕುಮಾರ್ ಕೂಗಿ ಹೇಳಿದರು.
ಇದರಿಂದ ಸಿಟ್ಟಾದಂತ ಬಿಜೆಪಿಯ ಶಾಸಕ ಸಿ.ಟಿ.ರವಿಯವರು, ಇದು ನಾಗ್ಪುರ ಎಜುಕೇಷನ್ ಪಾಲಿಸಿ ಅಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಎಂಬುದಾಗಿ ಟಾಂಗ್ ನೀಡಿದರು. ಈ ಮೂಲಕ ಆಡಳಿತ, ವಿಪಕ್ಷಗಳ ಶಾಸಕರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಈ ವೇಳೆ ಮಧ್ಯ ಪ್ರವೇಶಿಸಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಪಕ್ಷಗಳು ಆರ್ ಎಸ್ ಎಸ್ ಎಜುಕೇಷನ್ ಪಾಲಿಸಿ ಆದ್ರೂ ಅನ್ನಲೀ, ನಾಗ್ಪುರ ಎಜುಕೇಷನ್ ಪಾಲಿಸಿ ಆದ್ರೂ ಅನ್ನಲಿ. ಆದ್ರೇ ಶೈಕ್ಷಣಿಕ ವ್ಯವಸ್ಥೆ ಬದಲಾವಣೆ ಅವಶ್ಯಕತೆ ಇದೆ. ಇದಕ್ಕಾಗಿ ಯಾರ್ ಏನೇ ಅಂದ್ರೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದೇ ತರುತ್ತೇವೆ ಎಂಬುದಾಗಿ ತಿರುಗೇಟು ನೀಡಿದರು. ಇದರಿಂದಾಗಿ ಸದನದಲ್ಲಿ ಗದ್ದಲ ಕೋಲಾಹಲ ಉಂಟಾದ ಕಾರಣ ಸ್ಪೀಕರ್ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.