ಬೆಂಗಳೂರು: ಜೆಡಿಎಸ್ ನವರಿಗೆ ಐದು ವರ್ಷ ಸಿಎಂ ಪಟ್ಟ ಬಿಟ್ಟುಕೊಟ್ಟಿರುವುದಕ್ಕೆ ತಮಗೆ ಅಸಮಾಧಾನವಿದೆ ಎಂಬ ವರದಿಗಳ ಹಿನ್ನಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
‘ಕುಮಾರಸ್ವಾಮಿಯೇ ಐದು ವರ್ಷದ ಅವಧಿಗೆ ಸಿಎಂ ಆಗಿರುವುದಕ್ಕೆ ನನಗೇನೂ ಬೇಸರವಿಲ್ಲ. ಈ ಬಗ್ಗೆ ವೇಣುಗೋಪಾಲ್ ಬಳಿ ನಾನು ಚರ್ಚಿಸಿಯೂ ಇಲ್ಲ. ಸುಮ್ಮನೇ ನನ್ನ ಹೆಸರು ಎಳೆದು ತರಲಾಗುತ್ತಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಕುಮಾರಸ್ವಾಮಿ ಐದು ವರ್ಷದ ಅವಧಿಗೆ ಸಿಎಂ ಆಗುವುದಕ್ಕೆ ತಾನು ತಕರಾರು ತೆಗೆಯುವುದೂ ಇಲ್ಲ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.