ಬೆಂಗಳೂರು : ಧ್ವನಿವರ್ಧಕ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾದರೆ, ಡಿವೈಎಸ್ಪಿ ದರ್ಜೆಯಿಂದ ಮೇಲ್ಪಟ್ಟು ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವ ಅಧಿಕಾರ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಧ್ವನಿವರ್ಧಕಗಳ ಬಳಕೆಗೆ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಸೂಚಿಸಿದೆ. ಎಲ್ಲ ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಧ್ವನಿವರ್ಧಕ ಬಳಸುವುದಕ್ಕೂ ಅನುಮತಿ ಕಡ್ಡಾಯಗೊಳಿಸಿದೆ.
ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಹಾಗೂ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಮಿತಿಯಲ್ಲೇ ಮೈಕ್ಗಳ ಶಬ್ಧ ಪ್ರಮಾಣ ಇರಬೇಕು. ವಸತಿ ಪ್ರದೇಶಗಳಲ್ಲಿ ರಾತ್ರಿ 10ರ ಬಳಿಕ ವಾಹನಗಳ ಹಾರ್ನ್ ಗಳಿಗೂ ನಿರ್ಬಂಧವಿರಬೇಕು ಎಂದು ಆದೇಶಿಸಿದೆ.