ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಬಿಜೆಪಿಯ ಜಾಹೀರಾತುಗಳಿಗೆ ಚುನಾವಣಾ ಆಯೋಗ ತಡೆ ನೀಡಿರುವ ಹಿನ್ನಲೆಯಲ್ಲಿ ಇದೀಗ ಶೋಭಾ ಕರಂದ್ಲಾಜೆ ಅವರು ತಡೆ ನೀಡಿದ ಆದೇಶವನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಬಿಜೆಪಿ ಜನವಿರೋಧಿ ಸರ್ಕಾರ, ಮೂರು ಭಾಗ್ಯ, ವಿಫಲ ಸರ್ಕಾರದ ಹೆಸರಲ್ಲಿ ಜಾಹೀರಾತು ತಯಾರಿಸಿತ್ತು. ಈ ಜಾಹೀರಾತಿನ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಉಗ್ರಪ್ಪ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಕಾರಣ ಚುನಾವಣಾ ಆಯೋಗ ಮೂರು ಜಾಹೀರಾತನ್ನು ಪ್ರಸಾರ ಮಾಡದಂತೆ ತಡೆ ನೀಡಿತ್ತು.
ಇದರಿಂದ ಕೋಪಗೊಂಡ ಶೋಭಾ ಕರಂದ್ಲಾಜೆ ಅವರು,’ ಜಾಹೀರಾತುಗಳಿಗೆ ಆಯೋಗದ ಅನುಮತಿ ಪಡೆದಿದ್ದೇವೆ. ಉಗ್ರಪ್ಪನವರಿಗೆ ಬಿಜೆಪಿ ಜಾಹೀರಾತಿನ ಮೇಲೆ ಹೊಟ್ಟೆ ಉರಿಯಾಗಿದ್ದು. ಅದಕ್ಕೆ ದೂರು ಕೊಟ್ಟಿದ್ದಾರೆ. ಚುನಾವಣಾ ಆಯೋಗ ಅನುಮತಿ ನೀಡಿ, ಕೆಲ ಬದಲಾವಣೆಗಳನ್ನ ಹೇಳಿ ಈಗ ತಡೆ ಕೊಟ್ಟಿರುವುದು ಸರಿಯಲ್ಲ. ಚುನಾವಣಾ ಆಯೋಗ ಜಾಹಿರಾತುಗಳನ್ನು ಮರು ಪರಿಶೀಲನೆ ಮಾಡಬೇಕು. ಏಕಪಕ್ಷೀಯ ನಿರ್ಧಾರದಂತೆ ಕಾಣಿಸುತ್ತಿದೆ. ಅಧಿಕಾರಿಗಳು ಏಕಪಕ್ಷೀಯವಾಗಿ ನಡೆದುಕೊಳ್ಳಬಾರದು. ತಡೆ ನೀಡಿದ ಆದೇಶವನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ