ನವದೆಹಲಿ : ತನ್ನ ಸಿಬ್ಬಂದಿಗಾಗಿ ನೂತನ ಯುದ್ಧ ಸಮವಸ್ತ್ರವನ್ನು ಭಾರತೀಯ ವಾಯುಪಡೆ ಇಂದು ಅನಾವರಣಗೊಳಿಸಿದೆ.
ಚಂಡೀಗಢದಲ್ಲಿ ನಡೆದ ವಾಯುಪಡೆಯ 90ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಐಎಎಫ್ನ ಸಿಬ್ಬಂದಿಗೆ ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಲಾಯಿತು.
ಇದೇ ಮೊದಲ ಬಾರಿಗೆ ವಾಯುಪಡೆಯ ವಾರ್ಷಿಕೋತ್ಸವವನ್ನು ದೆಹಲಿಯ ಹೊರಗೆ ನಡೆಸಲಾಯಿತು. ಹೊಸ ಸಮವಸ್ತ್ರವನ್ನು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅನಾವರಣಗೊಳಿಸಿದರು.
ಈ ವರ್ಷದ ಆರಂಭದಲ್ಲಿ ಭಾರತೀಯ ಸೇನೆಯು ತನ್ನ ಸಿಬ್ಬಂದಿಗೆ ಡಿಜಿಟಲ್ ಕ್ಯಾಮೌಪ್ಲಾಗೆ ಸಮವಸ್ತ್ರವನ್ನು ಪರಿಚಯಿಸಿತ್ತು. ಇದು ಭೂಪ್ರದೇಶ ಸ್ನೇಹಿಯಾಗಿದ್ದು, ಮರುಭೂಮಿ, ಕಾಡುಪ್ರದೇಶ, ಪರ್ವತಮಯ ಪ್ರದೇಶಗಳಿಗೆ ಹೊಂದಿಕೊಳ್ಳುವ ಸಮವಸ್ತ್ರವಾಗಿದೆ.
ನೂತನ ಸಮವಸ್ತ್ರವು ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿದ್ದು, ಹಳೆಯ ಮಾದರಿಗಳ ಅನೇಕ ವಿನ್ಯಾಸಗಳೊಂದಿಗೆ ಬದಲಾಯಿಸಲಾಗಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಯುದ್ಧ ಪಡೆಗಳು ಹಾಗೂ ಮಿಲಿಟರಿಗಳು ಈ ಡಿಜಿಟಲ್ ಕ್ಯಾಮೌಪ್ಲಾ ಸಮವಸ್ತ್ರಗಳನ್ನು ಅಳವಡಿಸಿಕೊಂಡಿವೆ.