ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರ ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ ಪುತ್ರ ವಿಜೆಯೇಂದ್ರ, ಈ ಬಗ್ಗೆ ವರುಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಅಭಿಪ್ರಾಯಕ್ಕೆ ಬೆಲೆ ಕೊಡ್ತಿನಿ. ಬಿಜೆಪಿ ರಾಜ್ಯ, ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.
ವರುಣ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಅಂತ ಇನ್ನೂ ಘೋಷಣೆಯಾಗಿಲ್ಲ. ಇವತ್ತು ವರುಣ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆಯುತ್ತೇನೆ. ನಾನು ಕೂಡ ಕೊಳ್ಳೇಗಾಲದಲ್ಲಿ ಎರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದ್ದೆನೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಹೇಳಿರೋದು ಸರಿಯಿದೆ ನನಗೆ ಕ್ಷೇತ್ರದ ಬಗ್ಗೆ ಅಷ್ಟು ಅನುಭವವಿಲ್ಲ. ಆದರೆ ನಮ್ಮ ಕಾರ್ಯಕರ್ತರ ಸಲಹೆ ನಡೆಯುತ್ತೇನೆ. ನನಗೆ ಚುನಾವಣಾ ರಾಜಕೀಯ ಹೊಸದಿರಬಹುದು ಆದರೆ ರಾಜಕೀಯ ಅಲ್ಲ. ನನ್ನ ಪೂಜ್ಯ ತಂದೆಯವರ ಜತೆ ಕಳೆದ 10 ವರ್ಷಗಳಿಂದ ರಾಜಕೀಯವನ್ನು ಹತ್ತಿರದಿಂದ ನೋಡಿದ್ದೇನೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಅಣ್ಣ ರಾಘವೇಂದ್ರ ಶಿವಮೊಗ್ಗದಲ್ಲಿ ಮಾಜಿ ಸಿಎಂ ವಿರುದ್ಧ ನಿಂತು ಎಂಪಿಯಾಗಿದ್ದಾರೆ. 150 ಸೀಟ್ ಗೆಲ್ಲುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೊಂದೆ ನಮ್ಮ ಉದ್ದೇಶ. ಯಾರು ಎಲ್ಲಿ ಸ್ಪರ್ಧಿಸುತ್ತಾರೆ ಅನ್ನೋದು ಮುಖ್ಯವಲ್ಲ, ಈ ಬಾರಿ ವರುಣದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಮೈಸೂರಿನಲ್ಲಿ ಬಿಎಸ್ ವೈ ಕಿರಿಯ ಪುತ್ರ ಬಿ ವೈ ವಿಜೆಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.