ಬೆಂಗಳೂರು : ಕೋಟಿಗಟ್ಟಲೇ ಖರ್ಚು ಮಾಡಿ ವಿಧಾನಮಂಡಲ ಅಧಿವೇಶನ ನಡೆಸುತ್ತಾರೆ.
ಜನರ ತೆರಿಗೆ ದುಡ್ಡು ಮಾತ್ರ ಖಾಲಿ ಆಗುತ್ತೆ, ಅಧಿವೇಶನಕ್ಕೆ ಮಾತ್ರ ಶಾಸಕರು ಡೋಂಟ್ ಕೇರ್ ಅಂತಾರೆ. ವಿಧಾನಸಭೆ ಕಲಾಪಕ್ಕೆ ಶಾಸಕರ ನಿರಾಸಕ್ತಿ ಎದ್ದು ಕಾಣ್ತಿದೆ. ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ಶಾಸಕರ ಹಾಜರಾತಿಗೆ ಬರ ಬಂದಿದೆ.
ಇಂದು ಬೆಳಗ್ಗೆ ಕಲಾಪದಲ್ಲಿ 224 ಶಾಸಕರಲ್ಲಿ ಕಲಾಪಕ್ಕೆ ಹಾಜರಾದ ಶಾಸಕರ ಸಂಖ್ಯೆ 80 ಅನ್ನು ದಾಟಿಲ್ಲ. ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆ ನಡೆದ್ರೂ ಕೆಲವರಷ್ಟೇ ಭಾಗವಹಿಸ್ತಿದ್ದಾರೆ. ಇನ್ನು ಕೆಲ ಶಾಸಕರು ವಿಧಾನಸಭೆಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಲಾಪದಿಂದ ಮಾಯ ಆಗ್ತಿದ್ದಾರೆ.
ಇನ್ನೊಂದೆಡೆ ಭೋಜನ ನಂತರ ಕಲಾಪ ಆರಂಭಕ್ಕೆ ಮುಕ್ಕಾಲು ಗಂಟೆ ಬೆಲ್ ಹೊಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮೂಕ್ಕಾಲು ಗಂಟೆ ಬೆಲ್ ಹೊಡೆದ್ರೂ ಕೋರಂಗೆ ಅಗತ್ಯ ಇರುವಷ್ಟು ಶಾಸಕರು ಆಗಮಿಸಲಿರಲಿಲ್ಲ. ಮಧ್ಯಾಹ್ನದ ಬಳಿಕವೂ ಕಲಾಪದಲ್ಲೂ ಶಾಸಕರ ನಿರಾಸಕ್ತಿ ಇತ್ತು.
ಒಟ್ನಲ್ಲಿ ಶಾಸಕರಿಗೆ ಆಸಕ್ತಿ ಇಲ್ಲದ ಮೇಲೆ ವಿಧಾನಸಭೆ ಕಲಾಪ ಏಕೆ..? ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯನ್ನಾದ್ರೂ ಮಾಡಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬಾರದಾ..? ಕೋಟಿಗಟ್ಟಲೇ ಖರ್ಚು ಮಾಡಿ ಅಧಿವೇಶನ ನಡೆಸುವುದು ಯಾರಿಗಾಗಿ..? ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳೇ ಉತ್ತರಿಸಬೇಕು.