ವಾಷಿಂಗ್ಟನ್ : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಆಪ್ನಲ್ಲಿ ಹೊಸ ಹೊಸ ಬದಲಾವಣೆಗಳನ್ನು ತರಲು ಸಜ್ಜಾಗುತ್ತಿದ್ದಾರೆ.
ಇದೀಗ ಟ್ವಿಟ್ಟರ್ನಲ್ಲಿ ಬ್ಲೂ ಟಿಕ್ ಮಾರ್ಕ್ ಬೇಕೆಂದರೆ ಪಾವತಿಸುವ ಹೊಸ ಯೋಜನೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಟ್ವಿಟ್ಟರ್ ಮಸ್ಕ್ ತೆಕ್ಕೆಗೆ ಸೇರುತ್ತಿದ್ದಂತೆ ಅವರು ಬಳಕೆದಾರರಿಗೆ ಆಪ್ನ ಹೊಸ ಬದಲಾವಣೆಗಳ ಬಗ್ಗೆ ಕೆಲ ಸುಳಿವುಗಳನ್ನು ನೀಡಿದ್ದಾರೆ.
ಅವರು ಟ್ವಿಟ್ಟರ್ ಪರಿಶೀಲನೆ ಪ್ರತಿಕ್ರಿಯೆಯನ್ನು ಶೀಘ್ರದಲ್ಲೇ ನವೀಕರಿಸಲಾಗುವುದು ಎಂದಿದ್ದಾರೆ. ಇದರ ಪ್ರಕಾರ ಟ್ವಿಟ್ಟರ್ನಲ್ಲಿ ಬ್ಲೂ ಟಿಕ್ ಮಾರ್ಕ್ ಅಥವಾ ಪರಿಶೀಲಿಸಿದ ಪ್ರೊಫೈಲ್ಗಳಿಗೆ ಪಾವತಿಸುವ ನಿಯಮವನ್ನು ತರುವ ಸಾಧ್ಯತೆಯಿದೆ.