ಸಿಂಗಾಪುರ್ : ಜಾಗತಿಕವಾಗಿ ಆರಂಭಿಕ ಕ್ಲಿನಿಕಲ್ ಅವಲೋಕನಗಳು ಕೊವಿಡ್ 19 ಒಮಿಕ್ರಾನ್ ರೂಪಾಂತರವು ಹೆಚ್ಚು ಹರಡಬಹುದು ಎಂಬುದಾಗಿ ತೋರಿಸಿವೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ .
ಇದು ಕೊರೊನಾ ವೈರಸ್ನ ಡೆಲ್ಟಾ ಮತ್ತು ಬೀಟಾ ರೂಪಾಂತರಗಳಿಗೆ ಹೋಲಿಸಿದರೆ ಮರುಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಸೂಚಿಸುತ್ತದೆ ಎಂದು ಹೇಳಿದೆ. “ಇದರರ್ಥ ಕೊವಿಡ್19 ನಿಂದ ಚೇತರಿಸಿಕೊಂಡ ವ್ಯಕ್ತಿಗಳು ಒಮಿಕ್ರಾನ್ ರೂಪಾಂತರದೊಂದಿಗೆ ಮರುಸೋಂಕಿಗೆ ಒಳಗಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಸಚಿವಾಲಯವು ಭಾನುವಾರ ಹೇಳಿರುವುದಾಗಿ ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.