ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಗುಂಡಿ ಮುಚ್ಚದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.
ಬಿಬಿಎಂಪಿಯ ಕೆಲಸದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಪ್ರತಿಬಾರಿ ಮಳೆ ಬಂದಾಗಲೂ ರಸ್ತೆಗಳಲ್ಲಿ ಗುಂಡಿಗಳು ಪ್ರತ್ಯಕ್ಷವಾಗುತ್ತವೆ. ಆದರೆ ನೀವು ಮುಚ್ಚುವ ರಸ್ತೆಗುಂಡಿಗಳು, ದುರಸ್ತಿಪಡಿಸಿದ ರಸ್ತೆಗಳು ದೀರ್ಘಾವಧಿ ಬಾಳಿಕೆ ಏಕೆ ಬರುವುದಿಲ್ಲ ಪ್ರಶ್ನಿಸಿದೆ.
ಗುಂಡಿಗಳನ್ನು ಮುಚ್ಚಲು ಯಾವ ತಂತ್ರಜ್ಞಾನ, ಯಾವ ಕಾರ್ಯವಿಧಾನ ಅನುಸರಿಸಲಾಗುತ್ತದೆ..?. ಇದಕ್ಕೆಲ್ಲ ಪಾಲಿಕೆ ಮುಖ್ಯ ಇಂಜಿನಿಯರ್ ಹೊಣೆಯಾಗುತ್ತಾರೆ. ಅವರನ್ನು ಕಂಬಿ ಹಿಂದೆ ಕಳುಹಿಸಿದರೆ ಸರಿ ಹೋಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಆರ್. ಅವಸ್ಥಿ ಚಾಟಿ ಬೀಸಿದ್ದಾರೆ.