ಬೆಂಗಳೂರು : ರಾಜ್ಯದ ದೇವಸ್ಥಾನಗಳಲ್ಲಿ ಇನ್ಮುಂದೆ ಮೊಬೈಲ್ ಫೋನ್ ಬಳಕೆ ನಿಷೇಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.
ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧಿಸುವಂತೆ ಅಖಿಲ ಕರ್ನಾಟಕ ಹಿಂದೂ ದೇಗುಲಗಳ ಅರ್ಚಕರ ಒಕ್ಕೂಟ ಮನವಿಯಂತೆ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಒಂದು ವರ್ಷದಿಂದ ಮೊಬೈಲ್ ಬಳಕೆ ನಿಷೇಧಿಸುವಂತೆ ಮನವಿ ಮಾಡಿದ್ದ ಅರ್ಚಕರ ಒಕ್ಕೂಟಕ್ಕೆ ಸ್ಪಂದಿಸಿ ಇದೀಗ ಸುತ್ತೋಲೆ ಹೊರಡಿಸಿದೆ.
ಸದ್ಯ ಸರ್ಕಾರದ ನಿರ್ಧಾರವನ್ನು ಹಿಂದೂ ದೇಗುಲಗಳ ಅರ್ಚಕರ ಒಕ್ಕೂಟ ಸ್ವಾಗತಿಸಿದೆ. ಇನ್ಮುಂದೆ ದೇಗುಲಗಳ ಆವರಣದಲ್ಲಿ ಮೊಬೈಲ್ ಸೂಚನಾ ಫಲಕಹಾಕುವಂತೆ ಸೂಚಿಸಲಾಗಿದೆ. ಜೊತೆಗೆ ದೇವಸ್ಥಾನಕ್ಕೆ ಬರುವವರು ಕಡ್ಡಾಯವಾಗಿ ಮೊಬೈಲ್ ಸ್ಚಿಚ್ ಆಫ್ ಮಾಡಿ ದರ್ಶನ ಮಾಡುವಂತೆ ಆದೇಶ ನೀಡಲಾಗಿದೆ.