ಆರೋಗ್ಯ ಇಲಾಖೆಯಿಂದ ಹೆಚ್3ಎನ್2 ವೈರಸ್ ಗಂಭೀರತೆ ಮತ್ತು ಪರಿಣಾಮದ ಬಗ್ಗೆ ಸೋಮವಾರ ಮಹತ್ವದ ಸಭೆ ನಡೆಯಲಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ತಜ್ಞರ ಜೊತೆಗೆ ಸಭೆ ನಡೆಯಲಿದೆ.
ವೈರಸ್ ತಡೆಗೆ ಹಾಗೂ ಚಿಕಿತ್ಸೆ ವಿಧಾನದ ಬಗ್ಗೆ ಸಚಿವರು ಮಾಹಿತಿ ನೀಡಲಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಈ ಕುರಿತು ಗಮನ ಕೊಡುವಂತೆ ತಿಳಿಸಿರುವುದರಿಂದ ಹೆಚ್ಚಿನ ನಿಗಾವಹಿಸುವುದು ಅತೀ ಅಗತ್ಯ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.
ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ದೀರ್ಘ ಕಾಲದ ಕೆಮ್ಮು ಈ ವೈರಸ್ನ ಪ್ರಮುಖ ಗುಣಲಕ್ಷಣ ಎಂದು ಪ್ರಾರಂಭಿಕ ಪ್ರಕರಣದಲ್ಲಿ ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯು ಸೆಳೆತ ಸಮಸ್ಯೆ ಕೂಡ ಕಂಡು ಬರಬಹುದು.