ಒಮಿಕ್ರಾನ್ ಮ್ಯೂಟೆಂಟ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೊರೊನಾ ಲಸಿಕೆ ಬೂಸ್ಟರ್ ಡೋಸ್ ಬಗ್ಗೆ ಚರ್ಚೆ ಶುರುವಾಗಿದೆ.
ಒಂದ್ಕಡೆ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ಕೊಡಬೇಕೋ ಬೇಡವೋ ಅನ್ನೋ ಚಿಂತನೆ ನಡೆಸುತ್ತಿದ್ದರೆ, ಮತ್ತೊಂದೆಡೆ ನಮ್ಮ ದೇಶದಲ್ಲಿ ಬೂಸ್ಟರ್ ಯಾಕೆ ಕೊಡುತ್ತಿಲ್ಲವೆಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಸರ್ಕಾರ ಬೂಸ್ಟರ್ ಡೋಸ್ ಕೊಡಲು ಗ್ರೀನ್ ಸಿಗ್ನಲ್ ಕೊಟ್ರೆ ನಾವು ರೆಡಿಯಾಗಿದ್ದೇವೆ ಅಂತಾ ಖಾಸಗಿ ವ್ಯಾಕ್ಸಿನ್ ಕಂಪನಿಗಳು ತಿಳಿಸಿವೆ.
ಜೊತೆಗೆ, ಏಮ್ಸ್ ಕೂಡ ಬೂಸ್ಟರ್ ಡೋಸ್ ಬೇಕಾಗಬಹುದು ಎಂದಿದೆ. ಈಗ ಸರ್ಕಾರದ ನಿರ್ಧಾರದತ್ತ ಎಲ್ಲರ ಚಿತ್ತವೂ ನೆಟ್ಟಿದೆ. ಹೀಗಾಗಿ, ಸರ್ಕಾರ ಶೀಘ್ರದಲ್ಲಿಯೇ ಬೂಸ್ಟರ್ ಡೋಸ್ ಪಾಲಿಸಿ ತರಲು ಯೋಚಿಸುತ್ತಿದೆ. ಆದರೆ, ತಜ್ಞರ ಸಮಿತಿಯಿಂದ ವರದಿ ಬರುತ್ತಿದ್ದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎನ್ಟಿಎಜಿಐ ಮುಖ್ಯಸ್ಥ ಎನ್.ಕೆ. ಅರೋರಾ ಮಾಹಿತಿ ನೀಡಿದ್ದಾರೆ.